June 26, 2026
Friday, June 26, 2026
spot_img

Omelet | ಒಮ್ಮೆ ಈ ಚೀಸ್ ಕಾರ್ನ್ ಆಮ್ಲೆಟ್ ಟ್ರೈ ಮಾಡಿ, ನಾಳೆನೂ ಇದನ್ನೇ ಮಾಡ್ತೀರ

ಸಂಜೆಯ ಹೊತ್ತಿನಲ್ಲಿ ಚಹಾ ಅಥವಾ ಕಾಫಿಯ ಜೊತೆಗೆ ಸವಿಯಲು ರುಚಿಕರ ಮತ್ತು ಸುಲಭವಾಗಿ ತಯಾರಿಸಬಹುದಾದ ತಿಂಡಿ ಬೇಕೆಂದರೆ ಚೀಸ್ ಕಾರ್ನ್ ಆಮ್ಲೆಟ್ ಟ್ರೈ ಮಾಡಿ.

ಬೇಕಾಗುವ ಸಾಮಗ್ರಿಗಳು:

ಮೊಟ್ಟೆ – 2 ಅಥವಾ 3
ಬೇಯಿಸಿದ ಸ್ವೀಟ್ ಕಾರ್ನ್ – ¼ ಕಪ್
ತುರಿದ ಚೀಸ್ – 2 ಚಮಚ
ಈರುಳ್ಳಿ – 1
ಹಸಿಮೆಣಸಿನಕಾಯಿ – 1
ಬೆಣ್ಣೆ ಅಥವಾ ಎಣ್ಣೆ – 1 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಕರಿಮೆಣಸಿನ ಪುಡಿ – ಸ್ವಲ್ಪ
ಕೊತ್ತಂಬರಿ ಸೊಪ್ಪು – ಸ್ವಲ್ಪ

ಮಾಡುವ ವಿಧಾನ

ಮೊದಲು ಒಂದು ಪಾತ್ರೆಯಲ್ಲಿ ಮೊಟ್ಟೆ ಒಡೆದು ಹಾಕಿ. ಅದಕ್ಕೆ ಉಪ್ಪು, ಕರಿಮೆಣಸಿನ ಪುಡಿ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ ಚೆನ್ನಾಗಿ ಕದಡಿ.

ಬಾಣಲೆಯಲ್ಲಿ ಬೆಣ್ಣೆ ಹಾಕಿ ಬಿಸಿ ಮಾಡಿ. ನಂತರ ಈರುಳ್ಳಿ ಮತ್ತು ಹಸಿಮೆಣಸಿನಕಾಯಿಯನ್ನು ಹಾಕಿ ಸ್ವಲ್ಪ ಹುರಿಯಿರಿ. ಬಳಿಕ ಸ್ವೀಟ್ ಕಾರ್ನ್ ಸೇರಿಸಿ ಒಂದು ನಿಮಿಷ ಫ್ರೈ ಮಾಡಿ.

ಈಗ ಮೊಟ್ಟೆಯ ಮಿಶ್ರಣವನ್ನು ಸುರಿದು ಸಮವಾಗಿ ಹರಡಿ. ಕೆಳಭಾಗ ಬೇಯುತ್ತಿದ್ದಂತೆ ಮೇಲ್ಭಾಗದಲ್ಲಿ ಚೀಸ್ ಹಾಕಿ, ಆಮ್ಲೆಟ್ ಅನ್ನು ಅರ್ಧಕ್ಕೆ ಮಡಚಿ.

ಚೀಸ್ ಕರಗಿದ ನಂತರ ಬಿಸಿ ಬಿಸಿಯಾಗಿ ಸರ್ವ್ ಮಾಡಿ. ಸಂಜೆ ಸಮಯದ ಹಸಿವಿಗೆ ಈ ರುಚಿಕರ ಚೀಸ್ ಕಾರ್ನ್ ಆಮ್ಲೆಟ್ ಪರ್ಫೆಕ್ಟ್ ಸ್ನ್ಯಾಕ್ ಆಗಿರುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !