ಹೊಸದಿಗಂತ ವರದಿ ಮುಂಡಗೋಡ:
ಮುಂಡಗೋಡ ತಾಲೂಕಿನ ರೌಡಿಶೀಟರ ಹಾಗೂ ಅಕ್ರಮ ಬಡ್ಡಿ ವ್ಯವಹಾರ ಮಾಡುತ್ತಿದ್ದ14 ಜನರ ಮನೆಯ ಮೇಲೆ ಪೊಲೀಸರು ದಾಳಿ ಮಾಡಿ ಮನೆ ಶೋಧ ನಡೆಸಿದಾಗ ಜಿಂಕೆಯ ಕೊಂಬು, ಚಕ್ ಹಾಗೂ ಬಾಂಡ್ ಸಿಕ್ಕ ಘಟನೆ ಬುಧವಾರ ನಡೆದಿದೆ.
ಬುಧವಾರ ಬೆಳಿಗ್ಗೆ ಶಿರಶಿ ಡಿವೈಎಸ್ಪಿ ಗೀತಾ ಪಾಟೀಲ ನೇತೃತ್ವದಲ್ಲಿ ರೌಡಿಶೀಟರ ಹಾಗೂ ಅಕ್ರಮ ಬಡ್ಡಿ ವ್ಯವಹಾರ ಮಾಡುವ ಜನರ ಮನೆಯ ಮೇಲೆ ದಾಳಿ ಮಾಡಿದ್ದಾರೆ.

ಮನೆ ಶೋಧನೆಗೆ ನ್ಯಾಯಾಲಯದ ಆದೇಶ ಪಡೆದು ಹಾಗೂ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಮಾರ್ಗದರ್ಶನದಲ್ಲಿ ಈ ದಾಳಿ ನಡೆದಿದೆ.
ಇದನ್ನೂ ಓದಿ:
ನೆಹರು ನಗರದ ತೌಸಿಪ್ ಅಹ್ಮದ್ ಪಣಿಬಂದ ಎಂಬಾತನ ಮನೆಯ ಶೋಧ ನಡೆಸಿದಾಗ 8 ಚಕ್ ಹಾಗೂ ಬಾಂಡ್ ಗಳು ಪತ್ತೆಯಾಗಿವೆ. ದೇಶಪಾಂಡೆ ನಗರದ ಮಹಮ್ಮದ್ ಇಸ್ಮಾಯಿಲ್ ಪಾನವಾಲೆ ಎಂಬಾತ ಮನೆ ಶೋಧ ಕಾರ್ಯ ನಡೆಸಿದಾಗ ಜಿಂಕೆ ಕೊಂಬು ಪತ್ತೆಯಾಗಿದ್ದು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಂದಿರಾ ನಗರದ ಕಿರಣ ಸಾಳೇಂಕಿ, ಗಾಂಧಿನಗರದ ಮಂಜು ನವಲೆ, ಕಿಲ್ಲೆ ಓಣಿಯ ಮಲ್ಲಿಕಜಾನ (ಜಹೀರ) ಶೇಖ, ಇಂದಿರಾನಗರದ ಮಹಮ್ಮದ ಸಾಧಿಕ ಗಾಜೀಪೂರ, ಆನಂದ ನಗರದ ವಾಸಿಂಖಾನ ಬೆಂಡಿಗೇರಿ, ವಾಯ್. ಬಿ ರೋಡಿನ ಮಕ್ಬುಲ್ ಅಹ್ಮದ ಯಳ್ಳೂರ, ಬಸ್ಸಾಪುರ ಗ್ರಾಮದ ಮದುಸಿಂಗ್ ರಜಪೂತ, ಕಂಬಾರಗಟ್ಟಿಯ ಮಂಜುನಾಥ ಹೋಟಕರ್, ಚವಡಳ್ಳಿ ಗ್ರಾಮದ ಮಹಮ್ಮದ ಇಬ್ರಾಹಿಂ (ರಫೀಕ) ಜಮಖಂಡಿ, ಕಿಲ್ಲೆ ಓಣಿಯ ಹರುಣ ಶೇಖ, ಮಹಮ್ಮದ ಯೂಸಪ್ ಗಡವಾಲೆ, ಮತ್ತು ಗಾಂಧಿ ನಗರದ ಸಂಜು ನವಲೆ ಎಂಬಾತರ ಮನೆಯ ಮೇಲೆ ಪೊಲೀಸರ ಶೋಧ ಕಾರ್ಯಚರಣೆ ಮಾಡಿದ್ದಾರೆ.
ಶಿರಶಿ, ಬನವಾಸಿ ಯಲ್ಲಾಪುರ ಹಾಗೂ ಮುಂಡಗೋಡ ಪೊಲೀಸರು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.



