September 4, 2026
Friday, September 4, 2026
spot_img

ಎಲ್‌ಇಡಿ ಬಲ್ಬ್‌ ನುಂಗಿದ ಎಂಟು ತಿಂಗಳ ಕಂದಮ್ಮ, ಪೋಷಕರ ಎದೆಯಲ್ಲಿ ನಡುಕ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಎಂಟು ತಿಂಗಳ ಮಗುವೊಂದು ಎಲ್‌ಇಡಿ ಬಲ್ಬ್‌ ನುಂಗಿದ ಘಟನೆ ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ನಡೆದಿದೆ.

ಮನೆಯಲ್ಲಿಯೇ ಇದ್ದ ಮಗು ಇದ್ದಕ್ಕಿದ್ದಂತೆಯೇ ಜೋರಾಗಿ ಅಳಲು ಆರಂಭಿಸಿದೆ. ಎಷ್ಟು ಸಮಯವಾದರೂ ಮಗು ಅಳೋದನ್ನು ನಿಲ್ಲಿಸದಿದ್ದಾಗ ಪೋಷಕರಿಗೆ ಗಾಬರಿಯಾಗಿದೆ. ತಕ್ಷಣ ಅವರು ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ.

ಆಸ್ಪತ್ರೆಯಲ್ಲಿ ಎಕ್ಸ್‌ರೇ ತೆಗೆಸಿ ನೋಡಿದಾಗ ಮಗುವಿನ ಗಂಟಲಿನಲ್ಲಿ ಸಣ್ಣ ಲೋಹದ ವಸ್ತು ಕಾಣಿಸಿದೆ. ಪಿನ್‌ ನುಂಗಿರಬಹುದು ಎಂದು ಅಂದುಕೊಳ್ಳಲಾಗಿತ್ತು. ಆದರೆ ಲ್ಯಾರಿಂಗೋಸ್ಕೋಪ್‌ ಪರೀಕ್ಷೆ ವೇಳೆ ಮಗು ಎಲ್‌ಇಡಿ ಬಲ್ಬ್‌ ನುಂಗಿರುವುದು ಗೊತ್ತಾಗಿದೆ.

ನಂತರ ಶಸ್ತ್ರಚಿಕಿತ್ಸೆ ನಡೆಸಿ ಮಗುವಿನ ದೇಹದಿಂದ ಬಲ್ಬ್‌ ಹೊರಕ್ಕೆ ತೆಗೆಯಲಾಗಿದೆ.ಆಟವಾಡುವ ಸಂದರ್ಭದಲ್ಲೇ ಮಗು ಬಲ್ಬ್ ನುಂಗಿರುವ ಸಾಧ್ಯತೆ ಇದೆ ಎಂದು ತಿಳಿದುಬಂದಿದ್ದು, ಸದ್ಯ ಮಗು ಪ್ರಾಣಾಪಾಯದಿಂದ ಪಾರಾಗಿದೆ. ಮಗುವಿನ ಆರೋಗ್ಯ ಸ್ಥಿರವಾಗಿದ್ದು, ವೈದ್ಯರ ಸಮಯೋಚಿತ ಚಿಕಿತ್ಸೆ ಹಾಗೂ ಪೋಷಕರ ತಕ್ಷಣದ ಕ್ರಮದಿಂದ ದೊಡ್ಡ ಅನಾಹುತ ತಪ್ಪಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !