September 27, 2026
Sunday, September 27, 2026
spot_img

ಹಬ್ಬದ ನೆಪದಲ್ಲಿ ಸಾವಿನ ಸಂಚು: ಮುಂಬೈ ಪೊಲೀಸರ ಕಾರ್ಯಾಚರಣೆಯಿಂದ ತಪ್ಪಿದ ಭಾರೀ ಅನಾಹುತ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮೊಹರಂ ಮೆರವಣಿಗೆಯ ವೇಳೆ ಭಾರೀ ಅನಾಹುತ ಸೃಷ್ಟಿಸುವ ಶಂಕಿತ ಸಂಚುವೊಂದನ್ನು ಮುಂಬೈ ಪೊಲೀಸರು ವಿಫಲಗೊಳಿಸಿದ್ದಾರೆ.

ವಿಷಕಾರಿ ರಾಸಾಯನಿಕ ತುಂಬಿದ ಸಾವಿರಾರು ಕ್ಯಾಪ್ಸೂಲ್‌ಗಳನ್ನು ವಿತರಿಸಲು ಸಿದ್ಧತೆ ನಡೆಸಿದ್ದ ಆರೋಪಿಯನ್ನು ಬಂಧಿಸಿ, ಸುಮಾರು 14,900 ಕ್ಯಾಪ್ಸೂಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಸಂಚಿನ ಸುಳಿವು ಹೇಗೆ ಸಿಕ್ಕಿತು?

ಒಬ್ಬ ವ್ಯಕ್ತಿಗೆ ಕ್ಯಾಪ್ಸೂಲ್ ಸೇವಿಸಿದ ಬಳಿಕ ತೀವ್ರ ವಾಂತಿ ಹಾಗೂ ಹೊಟ್ಟೆನೋವು ಕಾಣಿಸಿಕೊಂಡ ಹಿನ್ನೆಲೆ ಪೊಲೀಸರು ತನಿಖೆ ಆರಂಭಿಸಿದರು. ವಿಚಾರಣೆ ವೇಳೆ ಅನುಮಾನಾಸ್ಪದ ವ್ಯಕ್ತಿಯೊಬ್ಬ ಮೊಹರಂ ಮೆರವಣಿಗೆಯ ಸಮೀಪ ಕ್ಯಾಪ್ಸೂಲ್ ಹಂಚಲು ಯತ್ನಿಸುತ್ತಿದ್ದ ಮಾಹಿತಿ ಲಭ್ಯವಾಯಿತು.

ಇದನ್ನೂ ಓದಿ:

ಮನೆ ಮೇಲಿನ ದಾಳಿಯಲ್ಲಿ ಬಯಲಾಯ್ತು ಪಿತೂರಿ

ಬಂಧಿತನನ್ನು ಪುಣೆ ಮೂಲದ ಫಯಾಜ್ ಎಂದು ಗುರುತಿಸಲಾಗಿದೆ. ಆತ ಮುಂಬೈನಲ್ಲಿ ಬಾಡಿಗೆ ಮನೆ ಪಡೆದು ಅಲ್ಲಿಯೇ ವಿಷಕಾರಿ ಜಿಂಕ್ ಫಾಸ್ಫೈಡ್ ಬಳಸಿ ಪ್ರತಿ ಕ್ಯಾಪ್ಸೂಲ್‌ನಲ್ಲಿ ಸುಮಾರು ಒಂದು ಗ್ರಾಂ ವಿಷ ತುಂಬಿದ್ದಾನೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಒಟ್ಟು 30 ಸಾವಿರ ಕ್ಯಾಪ್ಸೂಲ್ ತಯಾರಿಸುವ ಉದ್ದೇಶ ಹೊಂದಿದ್ದ ಎನ್ನಲಾಗಿದೆ.

ತನಿಖೆ ತೀವ್ರ

ಆರೋಪಿಯಿಂದ ಆಧಾರ್, ಪಾಸ್‌ಪೋರ್ಟ್ ಸೇರಿದಂತೆ ಹಲವು ದಾಖಲೆಗಳು ಮತ್ತು ವಿಷದ ಕ್ಯಾಪ್ಸೂಲ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಕೃತ್ಯದ ಹಿಂದೆ ಮತ್ತಷ್ಟು ಮಂದಿ ಭಾಗಿಯಾಗಿರುವ ಸಾಧ್ಯತೆಯನ್ನೂ ಪೊಲೀಸರು ಪರಿಶೀಲಿಸುತ್ತಿದ್ದು, ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿದಿದೆ.

Must Read