June 28, 2026
Sunday, June 28, 2026
spot_img

ನಾಡಪ್ರಭು ಕೆಂಪೇಗೌಡರ ಅವತಾರದಲ್ಲಿ ಲವ್ಲಿ ಸ್ಟಾರ್: ಭಾರಿ ಕುತೂಹಲ ಮೂಡಿಸಿದ ‘ಕೆಂಪಾಂಬುಧಿ’ ಟೀಸರ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸ್ಯಾಂಡಲ್‌ವುಡ್‌ನ ಲವ್ಲಿ ಸ್ಟಾರ್ ‘ನೆನಪಿರಲಿ’ ಪ್ರೇಮ್ ಅಭಿನಯದ ಬಹುನಿರೀಕ್ಷಿತ ಹಾಗೂ ಐತಿಹಾಸಿಕ ಹಿನ್ನೆಲೆಯ ‘ಕೆಂಪಾಂಬುಧಿ’ ಚಲನಚಿತ್ರದ ಅಧಿಕೃತ ಟೀಸರ್ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ನಟ ಪ್ರೇಮ್ ಮೊದಲ ಬಾರಿಗೆ ಬೆಂಗಳೂರು ನಿರ್ಮಾತೃ, ನಾಡಪ್ರಭು ಕೆಂಪೇಗೌಡರ ಐತಿಹಾಸಿಕ ಪಾತ್ರದಲ್ಲಿ ಗಂಭೀರ ಲುಕ್‌ನಲ್ಲಿ ಕಾಣಿಸಿಕೊಂಡು ಅಬ್ಬರಿಸಿದ್ದಾರೆ.

ಕಾದಂಬರಿ ಆಧಾರಿತ ಕಥಾಹಂದರ:

ಲೇಖಕ ಜಾಣಗೆರೆ ವೆಂಕಟರಾಮಯ್ಯರ ಜನಪ್ರಿಯ ಕಾದಂಬರಿಯನ್ನು ಆಧರಿಸಿ ಈ ಸಿನಿಮಾ ತಯಾರಾಗಿದೆ. ರಮೇಶ್ ಬೇಗಾರ್ ಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರವು, ಕೇವಲ ಯುದ್ಧ ಅಥವಾ ಸಾಮ್ರಾಜ್ಯದ ಇತಿಹಾಸಕ್ಕೆ ಸೀಮಿತವಾಗದೆ, ಕೆಂಪೇಗೌಡರ ಕೌಟುಂಬಿಕ ಹಿನ್ನೆಲೆ, ಅವರ ದೂರದೃಷ್ಟಿಯ ರಾಜನೀತಿ, ಸಾಮಾಜಿಕ ನ್ಯಾಯ ಮತ್ತು ಮುಖ್ಯವಾಗಿ ಕೆರೆ-ಕಟ್ಟೆಗಳನ್ನು ನಿರ್ಮಿಸಿದ ಪರಿಸರ ಸ್ನೇಹಿ ಪರಿಕಲ್ಪನೆಗಳನ್ನು ಅನಾವರಣಗೊಳಿಸಲಿದೆ. ಚರಿತ್ರೆಯ ಜತೆಗೆ ಇಂದಿನ ಆಧುನಿಕ ಕಾಲಘಟ್ಟದ ಕಥೆಯೂ ಸಿನಿಮಾದಲ್ಲಿ ಸಾಗಲಿದೆ.

ಇದನ್ನೂ ಓದಿ:

ಹಸಿರು ವೈಭವದ ಅನಾವರಣ ಹಾಗೂ ತಾರಾಗಣ:

‘ಗಾರ್ಡನ್ ಸಿಟಿ’ ಬೆಂಗಳೂರಿನ ಮೂಲ ಹಸಿರು ವೈಭವ ಹಾಗೂ ಪರಿಸರ ಸಂರಕ್ಷಣೆಯ ಮಹತ್ವ ಸಾರುವ ಈ ಚಿತ್ರದಲ್ಲಿ ಪ್ರೇಮ್‌ಗೆ ಜೋಡಿಯಾಗಿ ಮೇಘನಾ ಗಾಂವ್ಕರ್ ನಟಿಸಿದ್ದಾರೆ. ಉಳಿದಂತೆ ರಾಜೇಶ್ ನಟರಂಗ, ಸುಧಾ ಬೆಳವಾಡಿ, ಸಂಯುಕ್ತ ಹೊರನಾಡು ಸೇರಿದಂತೆ ಪ್ರಮುಖ ತಾರಾಗಣ ಈ ಸಿನಿಮಾದಲ್ಲಿದೆ. ವೀರ್ ಸಮರ್ಥ್ ಸಂಗೀತ ನಿರ್ದೇಶನವಿರುವ ಈ ಟೀಸರ್ ಸದ್ಯ ಚಿತ್ರಪ್ರೇಮಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !