June 29, 2026
Monday, June 29, 2026
spot_img

ಜರ್ಮನಿಯಲ್ಲಿ ಮತ್ತೆ ಗನ್‌ ಸಂಸ್ಕೃತಿ ಅಟ್ಟಹಾಸ: ಐವರ ದಾರುಣ ಸಾವು, ಇಬ್ಬರು ವಶಕ್ಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉತ್ತರ ಜರ್ಮನಿಯ ಸ್ಟೇಡ್ ಪಟ್ಟಣದಲ್ಲಿ ನಡೆದ ಭೀಕರ ಗುಂಡಿನ ದಾಳಿಯಲ್ಲಿ ಐದು ಜನರು ಜೀವ ಕಳೆದುಕೊಂಡಿದ್ದಾರೆ. ಹ್ಯಾಂಬರ್ಗ್ ನಗರದಿಂದ ಸುಮಾರು 40 ಕಿಲೋಮೀಟರ್ ದೂರದಲ್ಲಿರುವ, 50 ಸಾವಿರ ಜನಸಂಖ್ಯೆಯ ಈ ಶಾಂತಿಯುತ ಪಟ್ಟಣ ಈಗ ಬೆಚ್ಚಿಬಿದ್ದಿದೆ. ಸ್ಥಳೀಯ ಡಾಂಕರ್ಸ್‌ಸ್ಟ್ರಾಸ್ಸೆ ರಸ್ತೆಯ ಯುವ ಕಲ್ಯಾಣ ಕೇಂದ್ರದ ಬಳಿ ಈ ದುರಂತ ಸಂಭವಿಸಿದ್ದು, ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಇಬ್ಬರು ಶಂಕಿತರನ್ನು ಬಂಧಿಸಿದ್ದಾರೆ.

ಕಣ್ಗಾವಲಿನಲ್ಲಿ ಇಡೀ ಪ್ರದೇಶ: ತನಿಖೆ ತೀವ್ರ

ಘಟನಾ ಸ್ಥಳವನ್ನು ಸಂಪೂರ್ಣವಾಗಿ ಸೀಲ್ ಮಾಡಲಾಗಿದ್ದು, ವಿಧಿವಿಜ್ಞಾನ (ಫೋರೆನ್ಸಿಕ್) ತಜ್ಞರು ಸಾಕ್ಷ್ಯಗಳನ್ನು ಕಲೆಹಾಕುತ್ತಿದ್ದಾರೆ. ಮೃತರ ಗುರುತನ್ನು ಅಧಿಕಾರಿಗಳು ಇನ್ನೂ ಬಹಿರಂಗಪಡಿಸಿಲ್ಲ. ಈ ದಾಳಿಯ ಹಿಂದಿನ ನೈಜ ಕಾರಣ ಮತ್ತು ಉದ್ದೇಶ ಏನೆಂಬುದು ತನಿಖೆಯಿಂದಷ್ಟೇ ತಿಳಿಯಬೇಕಿದೆ.

ಹೆಚ್ಚಿದ ಆತಂಕ

ಕಳೆದ ಎರಡು ವರ್ಷಗಳಿಂದ ಜರ್ಮನಿಯಲ್ಲಿ ಸರಣಿ ಹಿಂಸಾತ್ಮಕ ಘಟನೆಗಳು ವರದಿಯಾಗುತ್ತಲೇ ಇವೆ. ಇದರ ಬೆನ್ನಲ್ಲೇ ನಡೆದಿರುವ ಇಂದಿನ ರಕ್ತಪಾತವು ದೇಶದ ಆಂತರಿಕ ಭದ್ರತೆಯ ಕುರಿತು ಸಾರ್ವಜನಿಕರಲ್ಲಿ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಹೆಚ್ಚಿನ ವಿವರಗಳಿಗಾಗಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !