ಹೊಸದಿಗಂತ ವರದಿ ಬೆಳಗಾವಿ:
ರಾಜ್ಯದ ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಾದ ಡಾ. ಜಿ. ಪರಮೇಶ್ವರ್ ಅವರು ಜುಲೈ 1ರಂದು ಬುಧವಾರ ಬೆಳಗಾವಿ ಹಾಗೂ ಧಾರವಾಡ ಜಿಲ್ಲೆಗಳಿಗೆ ಪ್ರವಾಸ ಕೈಗೊಳ್ಳಲಿದ್ದು, ವಿವಿಧ ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ಸ್ಮಾರ್ಟ್ ಕ್ಲಾಸ್ ಉದ್ಘಾಟನೆ ಮತ್ತು ಇಲಾಖಾ ಕಾರ್ಯಕ್ರಮಗಳು:
ನಿಗದಿತ ಪ್ರವಾಸ ಕಾರ್ಯಕ್ರಮದಂತೆ, ಬುಧವಾರ ನಾಳೆ ಬೆಳಗ್ಗೆ 10.30ಕ್ಕೆ ಕಂದಾಯ ಇಲಾಖೆಯ ದಿನಾಚರಣೆ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿಗಳು ಪಾಲ್ಗೊಳ್ಳಲಿದ್ದಾರೆ. ಬಳಿಕ ಬೆಳಗ್ಗೆ 11.30ಕ್ಕೆ ಕಂದಾಯ ಇಲಾಖೆ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಹಯೋಗದಲ್ಲಿ ಆಯೋಜಿಸಲಾಗಿರುವ ಬೆಳಗಾವಿ ವಿಭಾಗದ ಸರ್ಕಾರಿ ಶಾಲೆಗಳ ‘ಸ್ಮಾರ್ಟ್ ಕ್ಲಾಸ್’ಗಳ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಮಧ್ಯಾಹ್ನ 3.00 ಗಂಟೆಯಿಂದ ಸಂಜೆ 5.00 ಗಂಟೆಯವರೆಗೆ ಕಚೇರಿ ಕಾರ್ಯಗಳಿಗಾಗಿ ಸಮಯ ಕಾಯ್ದಿರಿಸಲಾಗಿದೆ.
ಇದನ್ನೂ ಓದಿ:
ಹುಬ್ಬಳ್ಳಿ ಪ್ರವಾಸದ ವಿವರ:
ರಸ್ತೆ ಮಾರ್ಗದ ಮೂಲಕ ಸಂಜೆ 5.00ಕ್ಕೆ ಬೆಳಗಾವಿಯಿಂದ ಹೊರಡಲಿರುವ ಅವರು, ಸಂಜೆ 6.30ಕ್ಕೆ ಹುಬ್ಬಳ್ಳಿಗೆ ತಲುಪಲಿದ್ದಾರೆ. ಸಂಜೆ 6.30ರಿಂದ ರಾತ್ರಿ 7.30ರವರೆಗೆ ಹುಬ್ಬಳ್ಳಿಯಲ್ಲಿ ಕಚೇರಿ ಕಾರ್ಯಗಳನ್ನು ನಿರ್ವಹಿಸಲಿದ್ದಾರೆ.
ಬೆಂಗಳೂರಿಗೆ ವಾಪಸ್:
ತಮ್ಮ ಪ್ರವಾಸದ ಬಳಿಕ ರಾತ್ರಿ 8.25ಕ್ಕೆ ಹುಬ್ಬಳ್ಳಿಯಿಂದ ಇಂಡಿಗೋ (6ಇ-7378) ವಿಮಾನದ ಮೂಲಕ ಪ್ರಯಾಣ ಬೆಳೆಸಲಿರುವ ಡಾ. ಜಿ. ಪರಮೇಶ್ವರ್ ಅವರು ರಾತ್ರಿ 9.50ಕ್ಕೆ ರಾಜಧಾನಿ ಬೆಂಗಳೂರನ್ನು ತಲುಪಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.



