ಹೊಸದಿಗಂತ ಡಿಜಿಟಲ್ ಡೆಸ್ಕ್:
ಹರಿಯಾಣದ ಅಂಬಾಲಾ ಜಿಲ್ಲೆಯ ಧನೌರಾ ಗ್ರಾಮದಲ್ಲಿ ನಾಲ್ಕು ವರ್ಷದ ಬಾಲಕನೊಬ್ಬ ತೆರೆದ ಕೊಳವೆಬಾವಿಗೆ ಬಿದ್ದು ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ.
ಸುಮಾರು 220 ಅಡಿ ಆಳದಲ್ಲಿ ಸಿಲುಕಿರುವ ಬಾಲಕನನ್ನು ಸುರಕ್ಷಿತವಾಗಿ ಹೊರತೆಗೆಯಲು ಸೇನೆ, ವಿಪತ್ತು ನಿರ್ವಹಣಾ ಪಡೆ ಹಾಗೂ ಸ್ಥಳೀಯ ಆಡಳಿತದ ತಂಡಗಳು ನಿರಂತರ ಕಾರ್ಯಾಚರಣೆ ನಡೆಸುತ್ತಿವೆ.
ಹೊಲದಲ್ಲಿ ಆಟ, ಕ್ಷಣದಲ್ಲೇ ಅವಘಡ
ನಿರ್ಭಯ್ ಸಿಂಗ್ ಎಂಬ ಬಾಲಕ ತನ್ನ ತಂದೆಯೊಂದಿಗೆ ಕೃಷಿ ಜಮೀನಿಗೆ ತೆರಳಿದ್ದ. ತಂದೆ ಕೆಲಸದಲ್ಲಿ ನಿರತರಾಗಿದ್ದ ವೇಳೆ ಬಾಲಕ ಹೊಲದಲ್ಲಿ ಆಟವಾಡುತ್ತಾ ತೆರೆದಿದ್ದ ಕೊಳವೆಬಾವಿಯ ಬಳಿ ಹೋಗಿದ್ದಾನೆ. ಕಾಲು ಜಾರಿ ಆಳವಾದ ಕೊಳವೆಬಾವಿಗೆ ಬಿದ್ದಿರುವುದನ್ನು ಕಂಡ ಕುಟುಂಬಸ್ಥರು ತಕ್ಷಣ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:
ಜೀವ ಉಳಿಸಲು ಭಾರಿ ಕಾರ್ಯಾಚರಣೆ
ಘಟನಾ ಸ್ಥಳಕ್ಕೆ ಆಗಮಿಸಿದ ರಕ್ಷಣಾ ತಂಡಗಳು ವಿಶೇಷ ಉಪಕರಣಗಳ ನೆರವಿನಿಂದ ಬಾಲಕನನ್ನು ಹೊರತೆಗೆದಲು ಪ್ರಯತ್ನಿಸುತ್ತಿವೆ. ಅಗತ್ಯವಿದ್ದರೆ ಕೊಳವೆಬಾವಿಯ ಪಕ್ಕದಲ್ಲೇ ಸಮಾನಾಂತರ ಸುರಂಗ ತೋಡಿ ರಕ್ಷಿಸುವ ಆಯ್ಕೆಯನ್ನೂ ಪರಿಶೀಲಿಸಲಾಗುತ್ತಿದೆ.
ಗ್ರಾಮದವರಲ್ಲಿ ಆತಂಕ
ಘಟನೆ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿದ್ದು, ಬಾಲಕ ಸುರಕ್ಷಿತವಾಗಿ ಹೊರಬರಲೆಂದು ಪ್ರಾರ್ಥಿಸುತ್ತಿದ್ದಾರೆ. ಬಾಲಕನ ಆರೋಗ್ಯ



