July 23, 2026
Thursday, July 23, 2026
spot_img

ಗೂಡ್ಸ್ ವಾಹನದಲ್ಲಿ ಅಕ್ರಮ ಮದ್ಯ ಸಾಗಾಟ: 150 ಬಾಕ್ಸ್ ಮದ್ಯ ಜಪ್ತಿ, ಓರ್ವನ ಬಂಧನ

ಹೊಸದಿಗಂತ ವರದಿ ಕಾರವಾರ:

ಗೂಡ್ಸ್ ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ವಿವಿಧ ಬ್ರಾಂಡುಗಳ ಗೋವಾ ಮದ್ಯವನ್ನು ಮಾಜಾಳಿ ಚೆಕ್ ಪೋಸ್ಟ್ ಬಳಿ ಅಬಕಾರಿ ಇಲಾಖೆಯವರು ವಶಪಡಿಸಿಕೊಂಡು ಓರ್ವನನ್ನು ಬಂಧಿಸಿದ್ದಾರೆ.

ಕೇರಳ ಕಾಸರಗೋಡು ಜಿಲ್ಲೆಯ ಪೆರಿಯಾ ಗ್ರಾಮದ ನಿವಾಸಿ ಮನ್ಸೂರ್ ಮೊಹಮ್ಮದ(32) ಬಂಧಿತ ವ್ಯಕ್ತಿಯಾಗಿದ್ದು 9 ಲಕ್ಷ ಮೌಲ್ಯದ ವಿವಿಧ ಬ್ರಾಂಡುಗಳ 1296 ಲೀಟರ್ ಮದ್ಯ ಇರುವ 150 ಬಾಕ್ಸುಗಳನ್ನು ಮತ್ತು 8 ಲಕ್ಷ ಮೌಲ್ಯದ ವಾಹನ ಸೇರಿದಂತೆ ಒಟ್ಟು 17 ಲಕ್ಷ ರೂಪಾಯಿ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮಂಗಳೂರು ಉಪವಿಭಾಗದ ಅಬಕಾರಿ ಜಂಟಿ ಆಯುಕ್ತರ ನಿರ್ದೇಶನದಂತೆ, ಅಬಕಾರಿ ಉಪ ಆಯುಕ್ತರು ಮತ್ತು ಉಪನಿರೀಕ್ಷಕರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು ಆರೋಪಿತನ ಮೇಲೆ ಕರ್ನಾಟಕ ಅಬಕಾರಿ ಕಾಯ್ದೆ 1965 ಅಡಿ ಪ್ರಕರಣ ದಾಖಲಿಸಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !