October 9, 2026
Friday, October 9, 2026
spot_img

ದಪ್ಪ ಇದ್ದಾಳೆ ಮಗು ಆಗತ್ತೋ ಇಲ್ವೋ ಎನ್ನುವ ಅನುಮಾನದಲ್ಲಿ ಪತ್ನಿಯನ್ನು ಕೊಂ*ದ ಪತಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಹೆಂಡತಿ ದಪ್ಪ ಇದ್ದಾಳೆ, ನೋಡೋಕೆ ಚೆನ್ನಾಗಿಲ್ಲ ಎನ್ನುವ ಕ್ಷುಲ್ಲಕ ಕಾರಣಕ್ಕೆ ಪತಿಯೇ ಪತ್ನಿಯನ್ನು ಮರ್ಡರ್‌ ಮಾಡಿದ ಘಟನೆ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಹಣಸಿ ಗ್ರಾಮದಲ್ಲಿ ನಡೆದಿದೆ.

ಪ್ರಿಯಾಂಕ ಕಮಲಾಕರ್‌ ಮೃತ ದುರ್ದೈವಿ. ಪ್ರಿಯಾಂಕ ಹಾಗೂ ಆರೋಪಿ ಬಸವರಾಜ್‌ ವಡ್ಡರ್‌ ಎರಡು ವರ್ಷದ ಹಿಂದೆ ಮದುವೆಯಾಗಿದ್ದರು. ಮದುವೆಯಾದ ಮೊದಲ ವರ್ಷ ಅನ್ಯೂನ್ಯವಾಗಿದ್ದ ಪತಿ, ನಂತರ ವರದಕ್ಷಿಣೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.

ಮನೆಯಿಂದ ಬಂಗಾರವನ್ನೂ ತರುತ್ತಿಲ್ಲ. ದಪ್ಪ ಬೇರೆ ಇದಿಯಾ, ನಿನಗೆ ಮಗು ಕೂಡ ಆಗುತ್ತಿಲ್ಲ. ನನಗೆ ಮಗುವನ್ನು ಹೆತ್ತುಕೊಡದ ಪತ್ನಿ ಬೇಡ ಎಂದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಪ್ರಿಯಾಂಕಾ ಪೋಷಕರು ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ. ಪ್ರಕರಣ ಸಂಬಂಧ ಬಸವರಾಜ್, ರೇಣವ್ವ, ಸುಭಾಷ್, ಸಿದ್ದರಾಮೇಶ್ ಬಂಧಿಸಿದ್ದಾರೆ.‌

Must Read