July 2, 2026
Thursday, July 2, 2026
spot_img

ಇಶಾನ್ ಕಿಶನ್ ಎಡವಟ್ಟು, ಅಭಿಷೇಕ್ ಗರಂ: ಸ್ಟಂಪ್ ಮೈಕ್‌ನಲ್ಲಿ ಸೆರೆಯಾಯ್ತು ಆಕ್ರೋಶದ ನುಡಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ಹಾಗೂ ಇಂಗ್ಲೆಂಡ್ ನಡುವಣ ಮೊದಲ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಆರಂಭಿಕ ಆಘಾತ ಎದುರಿಸಿದೆ. ಇದಕ್ಕೆ ಮುಖ್ಯ ಕಾರಣ ಸಂಜು ಸ್ಯಾಮ್ಸನ್ ಹಾಗೂ ಇಶಾನ್ ಕಿಶನ್ ಅವರ ವಿಕೆಟ್ ಪತನ. ಅದರಲ್ಲೂ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಇಶಾನ್ ಕಿಶನ್, ಸಹ-ಆಟಗಾರ ಅಭಿಷೇಕ್ ಶರ್ಮಾ ಅವರ ಕಡೆ ಗಮನಿಸದೇ ಸುಖಾ ಸುಮ್ಮನೆ ರನೌಟ್ ಆಗಿ ವಿಕೆಟ್ ಒಪ್ಪಿಸಿದರು.

ಸ್ಟಂಪ್ ಮೈಕ್‌ನಲ್ಲಿ ಸೆರೆಯಾಯ್ತು ಇಬ್ಬರ ಕಿತ್ತಾಟ

ಭಾರತದ ಇನ್ನಿಂಗ್ಸ್‌ನ 2ನೇ ಓವರ್‌ನಲ್ಲಿ ಇಶಾನ್ ಕಿಶನ್ ಮಿಡ್-ವಿಕೆಟ್ ಕಡೆಗೆ ಚೆಂಡನ್ನು ತಳ್ಳಿ ರನ್‌ಗಾಗಿ ಓಡಿದರು. ಆದರೆ ಇಂಗ್ಲೆಂಡ್ ಫೀಲ್ಡರ್ ಹ್ಯಾರಿ ಬ್ರೂಕ್ ಚೆಂಡನ್ನು ತಡೆದಿದ್ದನ್ನು ನೋಡಿ ಅಭಿಷೇಕ್ ಶರ್ಮಾ ರನ್ ನಿರಾಕರಿಸಿದರು. ಅಷ್ಟರಲ್ಲಾಗಲೇ ಕ್ರೀಸ್ ಮಧ್ಯೆ ಬಂದಿದ್ದ ಇಶಾನ್ ಕಿಶನ್ ಅವರನ್ನು ಜೋಸ್ ಬಟ್ಲರ್ ಸುಲಭವಾಗಿ ರನೌಟ್ ಮಾಡಿದರು. ಇದರಿಂದ ತೀವ್ರ ಅಸಮಾಧಾನಗೊಂಡ ಅಭಿಷೇಕ್, ಮೈದಾನದಲ್ಲೇ ಇಶಾನ್ ವಿರುದ್ಧ ಆಕ್ರೋಶ ಹೊರಹಾಕಿದರು. ಈ ಯುವ ಆಟಗಾರರ ಮಾತುಕತೆ ಸ್ಟಂಪ್ ಮೈಕ್‌ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ.

ಮಳೆಯಿಂದಾಗಿ ಪಂದ್ಯ ರದ್ದು

ಚೆಸ್ಟರ್-ಲೆ-ಸ್ಟ್ರೀಟ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಬೌಲಿಂಗ್ ಆಯ್ದುಕೊಂಡಿತ್ತು. ಮೊದಲು ಬ್ಯಾಟ್ ಮಾಡಿದ ಭಾರತ 20 ಓವರ್‌ಗಳಲ್ಲಿ 189 ರನ್ ಕಲೆಹಾಕಿತು. ಆದರೆ, ದ್ವಿತೀಯ ಇನ್ನಿಂಗ್ಸ್ ಆರಂಭಕ್ಕೂ ಮುನ್ನ ಭಾರೀ ಮಳೆ ಸುರಿದಿದ್ದರಿಂದ ಪಂದ್ಯವನ್ನು ರದ್ದುಗೊಳಿಸಲಾಯಿತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !