July 2, 2026
Thursday, July 2, 2026
spot_img

ಮನೆಗಳಲ್ಲಿ ಮಾಡ್ರನ್‌ ಇಂಟೀಯರ್ಸ್‌ ಟ್ರೆಂಡ್‌ ಇರಬಹುದು ಆದರೆ ಟ್ರಡೀಷನಲ್‌ ಅಂದವನ್ನು ಬೀಟ್‌ ಮಾಡೋಕಾಗೋದಿಲ್ಲ!

ಮನೆ ಕಟ್ಟೋದು ಎಲ್ಲರ ಜೀವಮಾನದ ಕನಸು, ಇದು ನನಸಾದ್ರೆ ಅದು ಜೀವಮಾನದ ಸಾಧನೆ. ಈಗೆಲ್ಲ ಭಿನ್ನ ವಿಭಿನ್ನ ಶೈಲಿಯ ಇಂಟೀರಿಯರ್ಸ್‌ ಇರುವ ಮನೆಗಳನ್ನು ನೋಡಿರ್ತೀರಿ. ಮೊದಲು ನೋಡೋಕೆ ಚಂದ ಇದೆ ಅನಿಸಿದ್ರೂ ಏನೋ ಒಂದು ರೀತಿಯಾದ ಖಾಲಿ, ಖಾಲಿ ಫೀಲಿಂಗ್‌! ನಾವು ನೀವೆಲ್ಲಾ ಬೆಳೆದ ಮನೆಗಳು ಏನಾಗಿತ್ತು? ಆ ಸ್ಟೈಲ್‌, ಆ ಅಂದ ಈ ಮಾಡ್ರನ್‌ ಇಂಟೀರಿಯರ್ಸ್‌ಲ್ಲಿ ಕಾಣೋದಿಲ್ಲ. ನಮ್ಮ ಮನೆಗೆ ಎಲ್ಲಾ ಮಾಡ್ರನ್‌ ಟೆಕ್ನಾಲಜಿ ಬೇಕು, ಆದರೆ ಜೀವಾಳವೂ ಇರಬೇಕು ಅನ್ನೋದಾದ್ರೆ ಮನೆಯಲ್ಲಿ ಈ ವಸ್ತುಗಳನ್ನು, ಇಂಟೀರಿಯರ್ಸ್‌ನ್ನು ಪ್ಲಾನ್‌ ಮಾಡಿ..

ಮರದ ಅಟ್ಟ ಮಾಡಿಸೋಕೆ ಸಾಧ್ಯವಾದರೆ ಅದನ್ನು ಮಾಡಿಸಿ. ಅದು ಆಗೋದಿಲ್ಲ ಎಂದಾದರೆ ಮರದ ಪೀಸ್‌ಗಳನ್ನು ಸೀಲಿಂಗ್‌ಗೆ ಹಾಕಿಸುವ ಪ್ಲಾನ್‌ ಮಾಡಿಕೊಳ್ಳಿ. ಸಿಂಪಲ್‌ ಕೆಲಸವಾದ್ರೂ ನಿಮ್ಮ ಮನೆಗೆ ಒಂದೊಳ್ಳೆ ಟ್ರಡಿಷನಲ್‌ ಲುಕ್‌ ನೀಡುತ್ತದೆ.

ಮನೆಯ ಅಂದವನ್ನು ಅರ್ಧ ನಿರ್ಧರಿಸೋದು ಪೇಯಿಂಟ್‌. ಹೌದು, ಹಳೆಯ ಕಾಲದ ರೀತಿ ಹಾಫ್‌ & ಹಾಫ್‌ ಪೇಂಟ್‌ ಮಾಡಿಸಿ. ಇದು ನಿಮ್ಮ ಮನೆಗೆ ಟ್ರಡಿಷನಲ್‌ ಲುಕ್‌ ಕೊಡುತ್ತದೆ. ಜೊತೆಗೆ ಗೋಡೆ ಗಲೀಜಾಗೋದು ಗೊತ್ತಾಗೋದಿಲ್ಲ.

ಹಳೇ ಕಾಲದಲ್ಲಿ ಮನೆಯ ಗೋಡೆಗಳಲ್ಲಿ ಗೂಡುಗಳನ್ನು ಮಾಡಿ ಅಲ್ಲಿಯೇ ದೇವರ ಮನೆ, ಅಲ್ಲಿಯೇ ಸೀಮೆ ಎಣ್ಣೆ ಬುಡ್ಡಿ ಇಡೋದಕ್ಕೆ ಜಾಗ ಮಾಡ್ತಿದ್ರು. ಇದನ್ನೇ ನಾವು ಶೋಕೇಸ್‌ ರೀತಿ ಬಳಕೆ ಮಾಡಬಹುದು.

ಮನೆಗೆ ಯಾವ ಬಣ್ಣದ ಟೈಲ್ಸ್‌ ಅಥವಾ ಗ್ರಾನೈಟ್‌ ಆಯ್ಕೆ ಮಾಡುತ್ತೀರಿ ಎನ್ನುವುದು ಕೂಡ ತುಂಬಾ ಮುಖ್ಯವಾಗುತ್ತದೆ. ರೆಡ್‌ ಆಕ್ಸೈಡ್‌, ಆಥನಗುಡಿ ಟೈಲ್ಸ್‌, ಚೆಟ್ಟಿನಾಡ್‌ ಫ್ಲೋರಿಂಗ್‌ ಮಾಡುವುದು ಉತ್ತಮ. ಇದು ಬಾಳಿಕೆಯೂ ಬರುತ್ತದೆ ಹಾಗೇ ಮನೆಗೆ ಒಂದೊಳ್ಳೆ ಲುಕ್‌ ನೀಡುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !