ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಮಾಜಿಕ ಜಾಲತಾಣಗಳಲ್ಲಿ ಕಳೆದ ಕೆಲವು ದಿನಗಳಿಂದ ಹರಿದಾಡುತ್ತಿದ್ದ ಒಂದು ಸುದ್ದಿ ಕ್ರಿಕೆಟ್ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿತ್ತು. ಹಾರ್ದಿಕ್ ಪಾಂಡ್ಯ ಸಿಎಸ್‌ಕೆ ಜರ್ಸಿ ತೊಡಲಿದ್ದಾರೆ ಎಂಬ ವದಂತಿಗೆ ಇದೀಗ ಚೆನ್ನೈ ಸೂಪರ್ ಕಿಂಗ್ಸ್ ಸ್ಪಷ್ಟನೆ ನೀಡಿ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆಯಲು ಮುಂದಾಗಿದೆ.
ವದಂತಿಗಳಿಗೆ ತೆರೆ ಎಳೆದ ಸಿಇಒ
ಸಿಎಸ್‌ಕೆ ಸಿಇಒ ಕಾಶಿ ವಿಶ್ವನಾಥನ್, ಹಾರ್ದಿಕ್ ಪಾಂಡ್ಯರನ್ನು ತಂಡಕ್ಕೆ ಸೇರಿಸಿಕೊಳ್ಳುವ ಕುರಿತು ಯಾವುದೇ ಮಾತುಕತೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿಗಳು ಕೇವಲ ಊಹಾಪೋಹಗಳಾಗಿದ್ದು, ಫ್ರಾಂಚೈಸಿಯು ಅಂತಹ ಯಾವುದೇ ಯೋಜನೆ ಹೊಂದಿಲ್ಲ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:
ಇನ್ನೂ ಆರಂಭವಾಗಿಲ್ಲ ತಂಡದ ಯೋಜನೆ
ಕಳೆದ ಐಪಿಎಲ್ ಆವೃತ್ತಿಯ ಪ್ರದರ್ಶನದ ಕುರಿತು ತಂಡ ಇನ್ನೂ ಅಧಿಕೃತ ಪರಿಶೀಲನೆ ನಡೆಸಿಲ್ಲ ಎಂದು ಕಾಶಿ ವಿಶ್ವನಾಥನ್ ಹೇಳಿದ್ದಾರೆ. ಮೇಜರ್ ಲೀಗ್ ಕ್ರಿಕೆಟ್ ಮುಗಿದ ಬಳಿಕವೇ ಮುಂದಿನ ಋತುವಿನ ಯೋಜನೆಗಳು ಮತ್ತು ಆಟಗಾರರ ಬಗ್ಗೆ ಚರ್ಚೆ ಆರಂಭವಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಸೋಶಿಯಲ್ ಮೀಡಿಯಾ ಸುದ್ದಿಗೆ ನಂಬಿಕೆ ಬೇಡ
ಹಾರ್ದಿಕ್ ಪಾಂಡ್ಯ ಅಥವಾ ಮುಂಬೈ ಇಂಡಿಯನ್ಸ್ ಆಡಳಿತದೊಂದಿಗೆ ಯಾವುದೇ ಸಂಪರ್ಕ ನಡೆದಿಲ್ಲ ಎಂದು ಸಿಎಸ್‌ಕೆ ಪುನರುಚ್ಚರಿಸಿದೆ. ಹೀಗಾಗಿ ಪಾಂಡ್ಯ ಚೆನ್ನೈ ತಂಡ ಸೇರುತ್ತಾರೆ ಎಂಬ ಸುದ್ದಿಗಳಿಗೆ ಯಾವುದೇ ಅಧಿಕೃತ ಆಧಾರವಿಲ್ಲ ಎನ್ನುವುದು ಫ್ರಾಂಚೈಸಿಯ ಸ್ಪಷ್ಟ ನಿಲುವಾಗಿದೆ.



