July 2, 2026
Thursday, July 2, 2026
spot_img

ಕಾರವಾರದ ಕೈಗಾ ಅಣುವಿದ್ಯುತ್ ಸ್ಥಾವರದಲ್ಲಿ ದಾದಾಗಿರಿ; ಮೇಘಾ ಕಂಪನಿ ಡೆಪ್ಯುಟಿ ಮ್ಯಾನೇಜರ್‌ಗೆ ಕೊ*ಲೆ ಬೆದರಿಕೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಕಾರವಾರ: ಕೈಗಾ ಅಣುವಿದ್ಯುತ್ ಸ್ಥಾವರದ ಘಟಕವೊಂದರ ನಿರ್ಮಾಣ ಕಾಮಗಾರಿ ಮಾಡುತ್ತಿರುವ ಮೇಘಾ ಕಂಪನಿಯ ಡೆಪ್ಯುಟಿ ಮ್ಯಾನೇಜರ್ ರಿಗೆ ಸ್ಥಳೀಯ ವ್ಯಕ್ತಿಯೋರ್ವ ಕೊಲೆ ಬೆದರಿಕೆ ಹಾಕಿದ ಘಟನೆಯು ನಡೆದಿದ್ದು, ಈ ಕುರಿತು ಮಲ್ಲಾಪುರ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲೆಯಾಗಿದೆ.

ಇದನ್ನೂ ಓದಿ;

ಮೇಘಾ ಕಂಪನಿಯ ಮೆಕಾನಿಕಲ್ ಡೆಪ್ಯುಟಿ ಮ್ಯಾನೇಜರ ವೆಂಕಟ ನಾಯ್ಡು ಕೈಗಾ ಅಣುವಿದ್ಯುತ್ ನಿರ್ಮಾಣ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಮೂಲತ: ಆಂಧ್ರಪ್ರದೇಶದ ಮಂಡಲ ಪುಟ್ಲೂರು ತಾಲೂಕಿನವರಾಗಿದ್ದಾರೆ. ಮಲ್ಲಾಪುರ ಮೂಲದ ಅಂಬರೀಷ ಬಾಂದೇಕರ ಎಂಬಾತ ವೆಂಕಟ ನಾಯ್ಡ ಕಚೇರಿಗೆ ಬಂದು ನೀವು ಹೊರ ರಾಜ್ಯದಿಂದ ಬಂದವರು, ನಾನು ಹೇಳಿದ ವ್ಯಕ್ತಿಗೆ ಮಾತ್ರ ಕೆಲಸ ನೀಡಬೇಕು. ಕಂಪನಿಯಲ್ಲಿ ತಾನು ಹೇಳೀದ ವ್ಯಕ್ತಿಗೆ ಒಳ್ಳೇಯ ಗಾಡಿ ನೀಡಬೇಕು.  ಹೊರ ರಾಜ್ಯದಿಂದ ಬಂದ ಡ್ರೈವರಿಗೆ ಹಳೆಯ ಗಾಡಿ ನೀಡಬೇಕು. ನಾನು ಹೇಳೀದ ಹಾಗೆ ಕೆಲಸದ ಸಮಯವನ್ನು ನಿಗದಿ ಪಡಿಸಬೇಕು. ನನ್ನ ಮಾತನನ್ನು ಕೇಳದೇ ಇದ್ದರೆ ಮಲ್ಲಾಪುರಕ್ಕೆ ಬಂದಾಗ ನಿಮ್ಮನ್ನು ಬಿಡುವದಿಲ್ಲ ಎಂದು ಅವಾಚ್ಯವಾಗಿ ಬೈಯ್ದು ಕೊಲೆ ಬೆದರಿಕೆ ಹಾಕಿದ್ದಾಗಿ ಡೆಪ್ಯುಟಿ ಮ್ಯಾನೇಜರ ವೆಂಕಟ ನಾಯ್ಡು ಮಲ್ಲಾಪುರ ಠಾಣೆಗೆ ಪ್ರಕರಣ ದಾಖಲಿಸಿದ್ದಾರೆ.  ಈ ಕುರಿತು ಮಲ್ಲಾಪುರ ಠಾಣೆಯಲ್ಲಿ ಅಂಬರೀಷ ಬಾಂದೇಕರ ವಿರುದ್ದ ಪ್ರಕರಣ ದಾಖಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !