July 3, 2026
Friday, July 3, 2026
spot_img

ಟೋಲ್ ಡಿವೈಡರ್ ಗೆ ಎಲ್‌ಪಿಜಿ ಟ್ಯಾಂಕರ್ ಢಿಕ್ಕಿ: ಭೀಕರ ಸ್ಫೋಟಕ್ಕೆ ಕನಿಷ್ಠ ನಾಲ್ಕು ಮಂದಿ ಸಜೀವ ದಹ*ನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಟೋಲ್ ಪ್ಲಾಜಾದ ಡಿವೈಡರ್ ಗೆ ಎಲ್ ಪಿಜಿ ಟ್ಯಾಂಕರ್ ಢಿಕ್ಕಿಯಾದ ಪರಿಣಾಮ ಸಂಭವಿಸಿದ ಭೀಕರ ಸ್ಫೋಟದಲ್ಲಿ ಕನಿಷ್ಠ 4 ಮಂದಿ ಸಜೀವ ದಹನವಾಗಿದ್ದು ಹಲವರು ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಕೌಶಂಬಿ ಬಳೀ ನಡೆದಿದೆ.

ಕೊಕ್ರಝಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಶಿಹೋರಿ ಟೋಲ್ ಪ್ಲಾಜಾದಲ್ಲಿ ಈ ಘಟನೆ ನಡೆದಿದ್ದು, ಕಾನ್ಪುರರಿಂದ ವಾರಣಾಸಿಗೆ ತೆರಳುತ್ತಿದ್ದ ಎಲ್‌ಪಿಜಿ ಟ್ಯಾಂಕರ್ ಅಗ್ನಿ ಅವಘಡದ ಸಿಸಿಟಿವಿ ದೃಶ್ಯಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿವೆ. ಭೀಕರ ಬೆಂಕಿ ಹೊತ್ತಿಕೊಳ್ಳುವ ಮುನ್ನ ಟ್ಯಾಂಕರ್ ಟೋಲ್ ಪ್ಲಾಜಾದ ಡಿವೈಡರ್‌ಗೆ ಡಿಕ್ಕಿ ಹೊಡೆದಿರುವುದು ದೃಶ್ಯಗಳಲ್ಲಿ ಕಂಡುಬಂದಿದೆ.

ಸಿಸಿಟಿವಿ ದೃಶ್ಯಗಳ ಪ್ರಕಾರ, ಎಲ್‌ಪಿಜಿ ಟ್ಯಾಂಕರ್ ಟೋಲ್ ಪ್ಲಾಜಾದತ್ತ ಸಾಗುತ್ತಿದ್ದ ವೇಳೆ ಪಕ್ಕದಲ್ಲೇ ಮತ್ತೊಂದು ಟ್ಯಾಂಕರ್ ಬಂದಿದ್ದು, ಒಂದು ಹಂತದಲ್ಲಿ ಎರಡೂ ಟ್ಯಾಂಕರ್ ಗಳು ಒಂದೇ ಪಥದಲ್ಲಿ ಸಾಗಲು ಮುಂದಾಗಿದ್ದವು. ಆದರೆ ಮತ್ತೊಂದು ಟ್ಯಾಂಕರ್ ನೋಡಿದ ಚಾಲಕ ಟ್ಯಾಂಕರ್ ಅನ್ನು ಏಕಾಏಕಿ ತಿರುಗಿಸಲು ಯತ್ನಿಸಿದ್ದು ಈ ವೇಳೆ ಟ್ಯಾಂಕರ್ ಡಿವೈಡರ್ ಗೆ ಢಿಕ್ಕಿಯಾಗಿದೆ.

ಟ್ಯಾಂಕರ್ ಚಾಲಕನನ್ನು ಉತ್ತರ ಪ್ರದೇಶದ ಮಿರ್ಜಾಪುರ ಜಿಲ್ಲೆಯ ಧರ್ಮೇಂದ್ರ ದ್ವಿವೇದಿ ಎಂದು ಗುರುತಿಸಲಾಗಿದ್ದು, ವಾಹನದ ಕ್ಯಾಬಿನ್ ಒಳಗೆ ಸಿಲುಕಿಕೊಂಡು ಬೆಂಕಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಮಾತ್ರವಲ್ಲದೇ ಐದು ಟೋಲ್ ಪ್ಲಾಜಾ ನೌಕರರಿಗೂ ತೀವ್ರ ಸುಟ್ಟ ಗಾಯಗಳಾಗಿದ್ದು, ಅವರನ್ನು ಪ್ರಯಾಗ್‌ರಾಜ್‌ನ ಸ್ವರೂಪ್ ರಾಣಿ ನೆಹರು (ಎಸ್‌ಆರ್‌ಎನ್) ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳಲ್ಲಿ ಒಬ್ಬರಾದ ಅಲೋಕ್ ಸಿಂಗ್ ಮರುದಿನ ಚಿಕಿತ್ಸೆಯ ಸಮಯದಲ್ಲಿ ನಿಧನರಾದರು ಎನ್ನಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !