ಆಲೂ ಗೋಬಿ ಫ್ರೈ ಉತ್ತರ ಭಾರತದ ಅತ್ಯಂತ ಜನಪ್ರಿಯ ಅಡುಗೆಯಲ್ಲಿ ಒಂದಾಗಿದೆ. ಇದು ಅಲೂಗೆಡ್ಡೆ ಮತ್ತು ಹೂಕೋಸಿ ನಿಂದ ತಯಾರಾಗುತ್ತದೆ. ಈ ಪಲ್ಯ ಊಟದ ಜೊತೆ ಅಥವಾ ರೋಟಿ, ಚಪಾತಿಯೊಂದಿಗೆ ಸೂಕ್ತ.
ಬೇಕಾಗುವ ಸಾಮಗ್ರಿಗಳು:
ಆಲೂಗಡ್ಡೆ – 2
ಹೂಕೋಸು – 1
ಎಣ್ಣೆ – 2 ಟೇಬಲ್ ಸ್ಪೂನ್
ಜೀರಿಗೆ – 1 ಟೀ ಸ್ಪೂನ್
ಹಸಿಮೆಣಸು – 2
ಹುಳಿ ಪುಡಿ – 1 ಟೀ ಸ್ಪೂನ್
ಮೆಣಸು ಪುಡಿ – ಅರ್ಧ ಟೀ ಸ್ಪೂನ್
ಮೆಣಸಿನ ಪುಡಿ – 1 ಟೀ ಸ್ಪೂನ್
ಉಪ್ಪು – ರುಚಿಗೆ ತಕ್ಕಂತೆ
ಕೊತ್ತಂಬರಿ ಸೊಪ್ಪು – 2 ಟೇಬಲ್ ಸ್ಪೂನ್
ತಯಾರಿಸುವ ವಿಧಾನ:
ಆಲೂಗಡ್ಡೆ ಹಾಗೂ ಗೋಬಿಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ,ತೊಳೆದು ಬೇಯಿಸಿಕೊಳ್ಳಿ.
ಪ್ಯಾನ್‌ನಲ್ಲಿ ಎಣ್ಣೆ ಹಾಕಿ, ಜೀರಿಗೆ ಮತ್ತು ಹಸಿಮೆಣಸು ಹಾಕಿ ಹುರಿಯಿರಿ.ಈಗ ಆಲೂ ಮತ್ತು ಗೋಬಿಯನ್ನು ಸೇರಿಸಿ 5–7 ನಿಮಿಷ ಹುರಿಯಿರಿ. ಈಗ ಅದಕ್ಕೆ ಮೆಣಸು ಪುಡಿ, ಹುಳಿ ಪುಡಿ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
ಮಧ್ಯಮ ಉರಿಯಲ್ಲಿ 8–10 ನಿಮಿಷ ತರಕಾರಿಗಳು ಹುರಿದಂತೆ ಹಾಗೂ ಸ್ವಲ್ಪ ಕ್ರಿಸ್ಪಿಯಾಗಿ ಆಗುವಂತೆ ಫ್ರೈ ಮಾಡಿ. ಕೊನೆಗೆ ಕೊತ್ತಂಬರಿ ಸೊಪ್ಪು ಹಾಕಿ ಬಿಸಿ ಬಿಸಿಯಾಗಿ ಸರ್ವ್ ಮಾಡಿ.