July 4, 2026
Saturday, July 4, 2026
spot_img

ದಿನಭವಿಷ್ಯ: ಬಂಧು-ಮಿತ್ರರಿಂದ ಧನಸಹಾಯ, ಅನಗತ್ಯ ವೆಚ್ಚಗಳಿಗೆ ಬ್ರೇಕ್ ಬೀಳಲಿದೆ

ಮೇಷ
ಆರೋಗ್ಯ ಸುಸ್ಥಿರ. ಚಿಂತೆ ಅನವಶ್ಯ. ಉದ್ದೇಶಿತ ಕಾರ್ಯಸಿದ್ಧಿ.  ಸ್ಪರ್ಧಾತ್ಮಕ ಪರಿಸ್ಥಿತಿ ನಿಮ್ಮ ಪಾಲಿಗೆ ಪೂರಕವಾಗಲಿದೆ.  ಕೌಟುಂಬಿಕ ಸಾಮರಸ್ಯ.
ವೃಷಭ
ದೈಹಿಕ ಶ್ರಮ ಹೆಚ್ಚು. ಮನೆಯವರ ಬೇಡಿಕೆ ಈಡೇರಿಸಲು ಹೆಚ್ಚು ಶ್ರಮ ಪಡುವಿರಿ. ಹಣದ ಕೊರತೆ ಕಾಡಬಹುದು. ಮಿತವ್ಯಯ ಸಾಽಸಿ.    
ಮಿಥುನ
ಯಾವುದೇ ಕೆಲಸ ಸಫಲವಾಗಲು ಪರಸ್ಪರ ಸಹಕಾರ ಅಗತ್ಯ. ಬಿಗುಮಾನ ಬಿಡಿ.  ಎಲ್ಲರ ಜತೆ ಹೊಂದಾಣಿಕೆಯಿಂದ ವರ್ತಿಸಿರಿ.
ಕಟಕ
ಕಾಡುತ್ತಿದ್ದ ದೈಹಿಕ ನೋವು ಶಮನ. ಕೌಟುಂಬಿಕ ಬಿಕ್ಕಟ್ಟು ಪರಿಹಾರ. ಖರ್ಚು ನಿಯಂತ್ರಣದ ಸಮಾಧಾನ.  
ಸಿಂಹ
ಬಂಧುಗಳಿಂದ ಲಾಭವಾಗಲಿದೆ. ಚಿಂತೆಗೆ ಕಾರಣವಾಗಿದ್ದ ವಿವಾದ ಪರಿಹಾರ. ನೆರೆಯವರ ಜತೆಗೆ ಸಂಘರ್ಷ ತಪ್ಪಿಸುವುದೊಳಿತು.  
ಕನ್ಯಾ
ನಿಮ್ಮ ಮುಂದೆ ಹಲವು ಅವಕಾಶಗಳು. ಆಯ್ಕೆಯ ಗೊಂದಲ. ಯೋಚಿಸಿ ನಿರ್ಧಾರ ತಾಳಿ. ಆರೋಗ್ಯದ ಕಡೆ ಹೆಚ್ಚು ಗಮನ ಕೊಡಿ. ಪಥ್ಯಾಹಾರ ಒಳಿತು.  
ತುಲಾ
ಆದ್ಯತೆಯ ಮೇರೆಗೆ ಕಾರ್ಯಾಚರಿಸಿ. ಅಮುಖ್ಯ ಕಾರ್ಯಗಳಿಗೆ ಮಹತ್ವ ಕೊಡಬೇಡಿ. ನೆಗೆಟಿವ್ ಚಿಂತನೆಯವರ ಪ್ರಭಾವಕ್ಕೆ ಸಿಲುಕಬೇಡಿ.  
ವೃಶ್ಚಿಕ
ನಿಮ್ಮ ಆಹಾರ ಸೇವನೆಯಲ್ಲಿ ಹೆಚ್ಚು ಶಿಸ್ತು ರೂಪಿಸಿ. ಅನಿಯಮಿತ ಆಹಾರದಿಂದ ಆರೋಗ್ಯ ಸಮಸ್ಯೆ. ಕೌಟುಂಬಿಕ ಅಸಹಕಾರ. ಧನಪ್ರಾಪ್ತಿ.
ಧನು
 ಕುಟುಂಬ ಸದಸ್ಯರ ಜತೆ ರಹಸ್ಯ ಬೇಡ. ಅದು ವಿರಸಕ್ಕೆ ಕಾರಣವಾದೀತು. ಮುಕ್ತ ಮಾತುಕತೆ ಒಳಿತು. ಆರ್ಥಿಕ ಒತ್ತಡ ಹೆಚ್ಚಲಿದೆ, ಧನವ್ಯಯ ಅಽಕ.
ಮಕರ
ವೃತ್ತಿಯಲ್ಲಿ ಹೆಚ್ಚು ಹೊಣೆಗಾರಿಕೆ. ಅದನ್ನು ನಿಭಾಯಿಸಲು ಹಿಂಜರಿಕೆ ಬೇಡ. ಮನೆಯಲ್ಲಿ ಮಾತಿನ ಸಂಘರ್ಷ ನಡೆದೀತು. ಸಂಯಮ ಅವಶ್ಯ.
ಕುಂಭ
ಮನೆಯಲ್ಲಿನ ಸಮಸ್ಯೆ ಇಂದು ಪರಿಹಾರ ಕಾಣಲಿದೆ. ಇನ್ನಿತರ ವಿಷಯಗಳತ್ತ ಗಮನ ಹರಿಸಲು ಸಕಾಲ. ಇನ್ನು ವಿಳಂಬ ಮಾಡದಿರಿ.        
 ಮೀನ
ಪ್ರಮುಖ ವಿಷಯ ದಲ್ಲಿ ಅನಿಶ್ಚಿತತೆ ಕಾಡುವುದು. ಗೊಂದಲಕ್ಕೆ ಆಸ್ಪದ ನೀಡದಿರಿ. ಹಿತೈಷಿಗಳ ಸಲಹೆ ಪಡೆದು ಮುಂದಿನ ಹೆಜ್ಜೆಯಿಡಿ. ಧನವ್ಯಯ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !