July 4, 2026
Saturday, July 4, 2026
spot_img

ಎಮ್ಮೆ, ನಾಯಿ ಸತ್ತರೂ ನನ್ನ ಖಾತೆಗೆ ಹಾಕ್ತಾರೆ! ಸಚಿವ ಸತೀಶ್ ಜಾರಕಿಹೊಳಿ ಕಿಡಿ

ಹೊಸದಿಗಂತ ಬೆಳಗಾವಿ:

ಚುನಾವಣೆಗಳು ಸಮೀಪಿಸುತ್ತಿದ್ದಂತೆ ವಿರೋಧ ಪಕ್ಷದವರು ನನ್ನನ್ನು ಗುರಿಯಾಗಿಸಿಕೊಂಡು ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಹಳ್ಳಿಯ ಮೂಲೆಯಲ್ಲಿ ಎಮ್ಮೆ, ನಾಯಿ ಸತ್ತರೂ ಅದನ್ನು ನನ್ನ ಖಾತೆಗೆ ಜಮೆ ಮಾಡುವುದು ವಿಪಕ್ಷಗಳಿಗೆ ಕೆಲಸವಾಗಿದೆ” ಎಂದು ಅವರು ಲೇವಡಿ ಮಾಡಿದ್ದಾರೆ.

ವೈಯಕ್ತಿಕ ಜಗಳಕ್ಕೆ ರಾಜಕೀಯ ಬಣ್ಣ!

ಹುಣಸಿಕೊಳ್ಳಮಠದ ಶ್ರೀ ಸಿದ್ದಬಸವ ಸ್ವಾಮೀಜಿ ಅವರ ಮೇಲೆ ನಡೆದಿರುವ ಹಲ್ಲೆ ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ. ಇದು ಸಂಪೂರ್ಣವಾಗಿ ವೈಯಕ್ತಿಕ ಕಾರಣಗಳಿಂದ ನಡೆದ ಘಟನೆಯಾಗಿದ್ದು, ಸ್ವತಃ ಸ್ವಾಮೀಜಿಯವರೇ ಈ ಬಗ್ಗೆ ಹೇಳಿಕೆ ನೀಡಿದ್ದಾರೆ. ಕಾನೂನು ತನ್ನ ಹಾದಿಯಲ್ಲಿ ಕೆಲಸ ಮಾಡಲಿದೆ. ಆದರೆ, ಬಿಜೆಪಿ ಮುಖಂಡ ಮಾರುತಿ ಅಷ್ಟಗಿ ಅವರು ಇದಕ್ಕೆ ರಾಜಕೀಯ ಬಣ್ಣ ಬಳಿಯಲು ಯತ್ನಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಇದು ಚುನಾವಣೆ ಮುನ್ನದ ಸುಳ್ಳು ಪ್ರಚಾರ!

ವಿಪಕ್ಷಗಳ ಬಳಿ ಯಾವುದೇ ಪ್ರಮುಖ ಮುದ್ದೆಗಳಿಲ್ಲದ ಕಾರಣ, ತಳಬುಡವಿಲ್ಲದ ಸುಳ್ಳು ಆರೋಪಗಳ ಮೂಲಕ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ನನ್ನ ಹೆಸರನ್ನು ಅನಗತ್ಯವಾಗಿ ಎಳೆದು ತರುತ್ತಿರುವುದು ಅವರ ಹತಾಶೆಯನ್ನು ತೋರಿಸುತ್ತದೆ. ಸಾರ್ವಜನಿಕರು ಇಂತಹ ಗಿಮಿಕ್‌ಗಳನ್ನು ನಂಬಬಾರದು ಎಂದು ಸಚಿವ ಸತೀಶ್ ಜಾರಕಿಹೊಳಿ ಮಾಧ್ಯಮಗಳ ಮೂಲಕ ಮನವಿ ಮಾಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !