September 28, 2026
Monday, September 28, 2026
spot_img

‘ಹೆಸರಿನಿಂದ ಪಂದ್ಯ ಗೆಲ್ಲಲು ಆಗಲ್ಲ’: ಟೀಮ್ ಇಂಡಿಯಾ ವಿರುದ್ಧ ಗವಾಸ್ಕರ್ ಗರಂ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐರ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಭಾರತ 2-0 ಅಂತರದಿಂದ ಸೋತಿರುವುದು ಭಾರತೀಯ ಕ್ರಿಕೆಟ್‌ಗೆ ದೊಡ್ಡ ಹಿನ್ನಡೆಯಾಗಿದೆ ಎಂದು ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಸೋಲನ್ನು ಭಾರತೀಯ ಕ್ರಿಕೆಟ್ ಇತಿಹಾಸದ ಅತ್ಯಂತ ನಿರಾಸಾದಾಯಕ ಕ್ಷಣಗಳಲ್ಲಿ ಒಂದೆಂದು ಅವರು ಬಣ್ಣಿಸಿದ್ದಾರೆ.

ಅತಿಯಾದ ಆತ್ಮವಿಶ್ವಾಸವೇ ಮುಳುವಾಯಿತೇ?

ಪಂದ್ಯದ ಪರಿಸ್ಥಿತಿ ಅರಿಯದೆ ಕೇವಲ ಹೆಸರಿನ ಬಲದ ಮೇಲೆ ಆಡಲು ಪ್ರಯತ್ನಿಸಿದ್ದರಿಂದ ಬ್ಯಾಟರ್‌ಗಳು ವಿಫಲರಾದರು ಎಂದು ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ. ಎದುರಾಳಿಯನ್ನು ಲಘುವಾಗಿ ಪರಿಗಣಿಸಿದ ಪರಿಣಾಮವೇ ಈ ಸೋಲು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ:

ತಂಡದ ಆಯ್ಕೆ ಬಗ್ಗೆ ಅಸಮಾಧಾನ

ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಉತ್ತಮ ಫಾರ್ಮ್‌ನಲ್ಲಿದ್ದರೂ ಅವಕಾಶ ನೀಡದಿರುವುದು ಅಚ್ಚರಿಯ ಸಂಗತಿ ಎಂದು ಗವಾಸ್ಕರ್ ಟೀಕಿಸಿದ್ದಾರೆ. ಇಂತಹ ಸರಣಿಗಳು ಹೊಸ ಆಟಗಾರರಿಗೆ ಅವಕಾಶ ನೀಡಲು ಸೂಕ್ತವಾಗಿದ್ದವು ಎಂದಿದ್ದಾರೆ.

ಯುವಕರಿಗೆ ಹೆಚ್ಚು ಅವಕಾಶ ಬೇಕು

ಫಾರ್ಮ್‌ನಲ್ಲಿರುವ ಆಟಗಾರರಿಗೆ ಆದ್ಯತೆ ನೀಡಬೇಕು. ಪ್ರದರ್ಶನ ನೀಡದವರ ಬದಲಿಗೆ ಯುವ ಪ್ರತಿಭೆಗಳನ್ನು ಬೆಳೆಸುವತ್ತ ತಂಡದ ಆಡಳಿತ ಹೆಚ್ಚು ಗಮನಹರಿಸಬೇಕು ಎಂದು ಗವಾಸ್ಕರ್ ಸಲಹೆ ನೀಡಿದ್ದಾರೆ.

Must Read