ಮೇಷ
ಖಾಸಗಿಯಲ್ಲೂ, ವೃತ್ತಿಯಲ್ಲೂ ಪ್ರಗತಿ. ಹೊಸ ಉದ್ಯೋಗದ ಅವಕಾಶ. ಆರೋಗ್ಯ ಸಮಸ್ಯೆ ಪರಿಹಾರ. ಆಪ್ತರ ಭೇಟಿಯಿಂದ ಸಂತೋಷ.
ವೃಷಭ
ಗುರಿ ಸಾಧನೆ. ನಿಮ್ಮ ನಿರಂತರ ಪ್ರಯತ್ನಕ್ಕೆ ಸಫಲತೆ. ದೀರ್ಘ ಕಾಲದಿಂದ ಕಾಯುತ್ತಿದ್ದ ಧನ ಲಾಭ ಸಿಗಬಹುದು. ಬಂಧು ಸಹಕಾರ.
ಮಿಥುನ
ನಿಮ್ಮ ಪಾಲಿಗೆ ಪೂರಕ ದಿನ. ನೀವು ಬಯಸಿದ ಬೆಳವಣಿಗೆ. ಆರೋಗ್ಯ ಸುಧಾರಣೆ. ಧನಪ್ರಾಪ್ತಿಯ ಸಂಕೇತ. ಕೌಟುಂಬಿಕ ಸಮ್ಮಿಲನ.
ಕಟಕ
ಇಂದು ನಿಮ್ಮ ದಿನ ಕಠಿಣವೆನಿಸಬಹುದು. ಸುಗಮವಾಗಿ ಸಾಗದು. ಕಾರ್ಯವಿಘ್ನ, ಬಂಧು ಜತೆ ವಿರಸ, ಅಽಕ ಖರ್ಚು ಉಂಟಾಗಲಿದೆ.
ಸಿಂಹ
ಅಡ್ಡಿ ಆತಂಕಗಳ ದಿನ. ಪ್ರಮುಖ ಕಾರ್ಯ ಮುಂದೂಡಿ. ಸಂಗಾತಿ ಜತೆ ವಿರಸ ಮೂಡದಂತೆ ಸಮಾಧಾನದಿಂದ ವರ್ತಿಸಿ. ಆರ್ಥಿಕ ಒತ್ತಡ.
ಕನ್ಯಾ
ನಿಮ್ಮ ಕೆಲಸ, ವರ್ತನೆ ಕೆಲವರು ಟೀಕಿಸಿಯಾರು. ಸರಿಯಾದ ದಾರಿ ನಿಮ್ಮದಾಗಿದ್ದರೆ ಒತ್ತಡಕ್ಕೆ ಮಣಿಯಬೇಡಿ. ಹೆಚ್ಚುವರಿ ಖರ್ಚು.
ತುಲಾ
ಎಲ್ಲ ಕಾರ್ಯ ಸುಗಮ. ಎಲ್ಲವೂ ನಿಮಗೆ ಪೂರಕವಾಗಿಯೇ ಸಾಗಲಿದೆ. ಧನಪ್ರಾಪ್ತಿ. ಹಳೆಯ ಹೂಡಿಕೆಯ ಲಾಭ ಸಿಗಲಿದೆ.
ವೃಶ್ಚಿಕ
ಹೆಚ್ಚುವರಿ ಹೊಣೆ. ಕಾಲಮಿತಿಯಲ್ಲಿ ಕಾರ್ಯ ಪೂರೈಸಿ. ಆಪ್ತ ಬಂಧು ಜತೆ ವಿರಸ ಸಂಭವ. ಸಹನೆಯ ವರ್ತನೆ ಪ್ರದರ್ಶಿಸಿ. ದುಡುಕದಿರಿ.
ಧನು
ನೆಗೆಟಿವ್ ಚಿಂತನೆ ಬಾಽಸಬಹುದು. ಅದನ್ನು ಮೊದಲು ನಿವಾರಿಸಿ. ಸಂಗಾತಿ ಜತೆ ವಾಗ್ವಾದಕ್ಕೆ ಇಳಿಯಬೇಡಿ. ಹೊಂದಾಣಿಕೆ ಒಳಿತು.
ಮಕರ
ಕೆಲವು ಪ್ರತಿಕೂಲ ಸುದ್ದಿ ಕೇಳುವಿರಿ. ಅದು ಆಶಾಂತಿ ಸೃಷ್ಟಿಸೀತು. ಹಣದ ವಿಚಾರದಲ್ಲಿ ದುಡುಕಿನ ಕಾರ್ಯ ಬೇಡ. ಸಂಯಮವಿರಲಿ.
ಕುಂಭ
ಚಿಂತೆ ಪರಿಹಾರ. ಮಾನಸಿಕ ನಿರಾಳತೆ. ಬಂಧು ಭೇಟಿಯಿಂದ ಸಂತೋಷ. ಆಸ್ತಿಗೆ ಸಂಬಂಽಸಿದ ವ್ಯಾಜ್ಯ ಇತ್ಯರ್ಥವಾದೀತು.
ಮೀನ
ಕಾಲಮಿತಿಯಲ್ಲಿ ಕೆಲಸ ಪೂರೈಸಿ. ನಾಳೆಗೆ ಮುಂದೂಡಬೇಡಿ. ಆರ್ಥಿಕ ಲಾಭ. ಆದರೆ ಖರ್ಚು ನಿಯಂತ್ರಣ ಅವಶ್ಯ. ಬಂಧು ಭೇಟಿ.



