July 5, 2026
Sunday, July 5, 2026
spot_img

ನಕಲಿ ಗನ್ ಹಿಡಿದು ದಾದಾಗಿರಿ ಮಾಡಲು ಹೋಗಿ ಪೊಲೀಸರ ಅತಿಥಿಯಾದ ರೀಲ್ಸ್ ಬಾಯ್ಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳಲು ಸಾರ್ವಜನಿಕರಲ್ಲಿ ಆತಂಕ ಮೂಡಿಸುವಂತೆ ವಿಡಿಯೋ ಮಾಡಿದ್ದ ಮೂವರು ಯುವಕರನ್ನು ಬಳ್ಳಾರಿಯ ಕೌಲ್‌ ಬಜಾರ್‌ ಠಾಣೆಯ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ. ಬಂಧಿತರನ್ನು ಸಾಹಿಲ್, ವಿಕಾಸ್ ಮತ್ತು ಅಭಿಷೇಕ್ ಎಂದು ಗುರುತಿಸಲಾಗಿದೆ.

ಸಾರ್ವಜನಿಕರಲ್ಲಿ ಭೀತಿ ಮೂಡಿಸಿದ್ದ ವಿಡಿಯೋ

ನಗರದ ಬಂಡಿಹಟ್ಟಿ ಸಮೀಪವಿರುವ ಹೆಚ್‌ಎಲ್‌ಸಿ ಕಾಲುವೆ ಬಳಿ ಈ ಯುವಕರು ಜನಸಾಮಾನ್ಯರಿಗೆ ಹೆದರಿಕೆ ಉಂಟುಮಾಡುವ ಶೈಲಿಯಲ್ಲಿ ರೀಲ್ಸ್ ಚಿತ್ರೀಕರಿಸಿದ್ದರು. ನಕಲಿ ಡಬಲ್ ಬ್ಯಾರೆಲ್ ಗನ್ ಹಾಗೂ ಪಿಸ್ತೂಲ್‌ಗಳನ್ನು ಪ್ರದರ್ಶಿಸುತ್ತಾ, ವಿಡಿಯೋ ಮಾಡಿ ಅದನ್ನು ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹರಿಬಿಟ್ಟಿದ್ದರು. ಇದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು.

ಖಾಕಿ ಆ್ಯಕ್ಷನ್: ನಕಲಿ ಆಯುಧಗಳು ಜಪ್ತಿ

ವಿಡಿಯೋ ವೈರಲ್ ಆಗುತ್ತಿದ್ದಂತೆ ತಕ್ಷಣ ಕಾರ್ಯಪ್ರವೃತ್ತರಾದ ಕೌಲ್ ಬಜಾರ್ ಪೊಲೀಸರು, ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಿ ಕಂಬಿ ಹಿಂದೆ ತಳ್ಳಿದ್ದಾರೆ. ಸದ್ಯ ಇವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇನ್ನು ರೀಲ್ಸ್ ಚಿತ್ರೀಕರಣಕ್ಕೆ ಇವರು ಬಳಸಿದ್ದ ಡಬಲ್ ಬ್ಯಾರೆಲ್ ಮತ್ತು ಪಿಸ್ತೂಲ್ ಮಾದರಿಯ ನಕಲಿ ಆಯುಧಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಲೈಕ್ಸ್ ಹಾಗೂ ವೀವ್ಸ್‌ಗಾಗಿ ಇಂತಹ ಕಾನೂನುಬಾಹಿರ ಕೃತ್ಯ ಎಸಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !