ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಏಷ್ಯಾದ ಉದ್ವಿಗ್ನ ಪರಿಸ್ಥಿತಿಯ ನಡುವೆಯೂ ಭಾರತಕ್ಕೆ ರಸಗೊಬ್ಬರ ಪೂರೈಕೆಯಲ್ಲಿ ಯಾವುದೇ ದೊಡ್ಡ ವ್ಯತ್ಯಯ ಉಂಟಾಗಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ದೇಶದತ್ತ ಹೊರಟಿದ್ದ 20 ಹಡಗುಗಳಲ್ಲಿ 15 ಹಡಗುಗಳು ಹಾರ್ಮುಜ್ ಜಲಸಂಧಿಯನ್ನು ಸುರಕ್ಷಿತವಾಗಿ ದಾಟಿವೆ ಎಂದು ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ ತಿಳಿಸಿದೆ.
ಯೂರಿಯಾ, ಡಿಎಪಿ ಸೇರಿ ಭಾರೀ ಪ್ರಮಾಣದ ಸರಕು
ಈ ಹಡಗುಗಳಲ್ಲಿ ಯೂರಿಯಾ, ಡಿಎಪಿ ಹಾಗೂ ಸಲ್ಫರ್ ಸೇರಿದಂತೆ ಲಕ್ಷಾಂತರ ಟನ್ ರಸಗೊಬ್ಬರ ಮತ್ತು ಕಚ್ಚಾ ವಸ್ತುಗಳಿದ್ದು, ಅವು ನಿಗದಿತ ವೇಳಾಪಟ್ಟಿಯಂತೆ ಭಾರತೀಯ ಬಂದರುಗಳಿಗೆ ತಲುಪುವ ನಿರೀಕ್ಷೆಯಿದೆ. ಉಳಿದ ಹಡಗುಗಳಲ್ಲಿ ಲೋಡಿಂಗ್ ಕಾರ್ಯವೂ ಪ್ರಗತಿಯಲ್ಲಿದೆ.
ಇದನ್ನೂ ಓದಿ:
ಪರ್ಯಾಯ ದೇಶಗಳಿಂದಲೂ ಪೂರೈಕೆ ಮುಂದುವರಿಕೆ
ರಸಗೊಬ್ಬರ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗದಂತೆ ಕೇಂದ್ರ ಸರ್ಕಾರ ನಿರಂತರ ಮೇಲ್ವಿಚಾರಣೆ ನಡೆಸುತ್ತಿದ್ದು, ವಿವಿಧ ದೇಶಗಳಿಂದ ಪರ್ಯಾಯ ಮಾರ್ಗಗಳ ಮೂಲಕವೂ ಅಗತ್ಯ ರಸಗೊಬ್ಬರ ಮತ್ತು ಕಚ್ಚಾ ವಸ್ತುಗಳನ್ನು ಭಾರತಕ್ಕೆ ತರಲಾಗುತ್ತಿದೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.



