July 6, 2026
Monday, July 6, 2026
spot_img

ಪಾಕಿಸ್ತಾನದ ಫೇರ್‌ನೆಸ್‌ ಕ್ರೀಂ ಬಳಸಿದ 18 ಭಾರತೀಯ ಮಹಿಳೆಯರಿಗೆ ಕಿಡ್ನಿ ಸಮಸ್ಯೆ! ಸುದ್ದಿ ವೈರಲ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸಾಮಾಜಿಕ ಜಾಲತಾಣದಲ್ಲಿ ಸಿಗುವ ಕ್ರೀಂಗಳನ್ನು ಬಳಸೋ ಮುಂಚೆ ಒಮ್ಮೆ ಥಿಂಕ್‌ ಮಾಡೋದು ಬೆಸ್ಟ್‌! ಮೀಶೋದಲ್ಲಿ ಸಿಗುತ್ತದೆ ಎನ್ನಲಾದ ಪಾಕಿಸ್ತಾನಿ ಮೂಲದ ಫೇರ್‌ನೆಸ್‌ ಕ್ರೀಂ ಒಂದನ್ನು ಹಚ್ಚಿಕೊಂಡ ಭಾರತೀಯ ಮಹಿಳೆಯರಿಗೆ ಕಿಡ್ನಿ ಸಮಸ್ಯೆ ಬಂದಿದೆ.

ಹೌದು, ಮಹಾರಾಷ್ಟ್ರದ ನಾಗ್ಪುರದಲ್ಲಿ ಪಾಕಿಸ್ತಾನಿ ಮೂಲದ ” ಗೋರಿ ಬ್ಯೂಟಿ ಕ್ರೀಮ್ ” ಬಳಸಿದ ಮಹಿಳೆಯರು ಇದೀಗ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಸುದ್ದಿ ಎಲ್ಲೆಡೆ ವೈರಲ್‌ ಆಗಿದೆ. ಸಾಮಾನ್ಯವಾಗಿ ಪಾಕಿಸ್ತಾನಿ ವಸ್ತುಗಳನ್ನು ಭಾರತೀಯರು ಬಳಕೆ ಮಾಡುವಂತಿಲ್ಲ. ಭಾರತ ಮತ್ತು ಪಾಕಿಸ್ತಾನದ ನಡುವೆ ವ್ಯಾಪಾರ ಸಂಬಂಧಗಳು ಈಗಾಗಲೇ ನಿಷೇಧ ಮಾಡಿದರೂ ಮಾರುಕಟ್ಟೆಯಲ್ಲಿ ಇದರ ಬಳಕೆ ಹೇಗೆ ಎಂದು ಹಲವಾರು ಚರ್ಚೆ ಮಾಡುತ್ತಿದ್ದಾರೆ. ಮಹಾರಾಷ್ಟ್ರ ಎಫ್‌ಡಿಎ ಪ್ರಕಾರ ಚರ್ಮವನ್ನು ಬಿಳಿಚಿಸುವ ಈ ಕ್ರೀಮ್ ಕಾನೂನುಬದ್ಧವಾಗಿ ಅನುಮತಿಸುವ ಮಿತಿಗಿಂತ 752 ಪಟ್ಟು ಪಾದರಸವನ್ನು ಹೊಂದಿದೆ. ಹೀಗಾಗಿ ಮಹಿಳೆಯರು ಅನಾರೋಗ್ಯಕ್ಕೀಡಾಗಿದ್ದಾರೆ ಎನ್ನಲಾಗಿದೆ.

ಈ ಕ್ರೀಮ್‌ನಲ್ಲಿರುವ ಪಾದರಸವು ಚರ್ಮಕ್ಕೆ ಬಣ್ಣ ನೀಡುವ ‘ಮೆಲನಿನ್’ ಉತ್ಪಾದನೆಯನ್ನು ಕಡಿಮೆ ಮಾಡುವಂತೆ ಮಾಡುತ್ತದೆ. ಇದರಿಂದ ಚರ್ಮವು ಬೇಗನೆ ಬೆಳ್ಳಗೆ ಕಾಣುತ್ತದೆ. ಆದರೆ ಇದು ದೇಹಕ್ಕೆ ನೀಡುವ ಸೌಂದರ್ಯ ಅಲ್ಲ ನಮ್ಮ ಚರ್ಮವು ಈ ಪಾದರಸವನ್ನು ಹೀರಿಕೊಳ್ಳುತ್ತದೆ.ಇದು ರಕ್ತದ ಮೂಲಕ ದೇಹವನ್ನು ಸೇರಿ ಕಾಲಕ್ರಮೇಣ ಕಿಡ್ನಿಗಳಲ್ಲಿ ಶೇಖರಣೆಯಾಗಿ ಆರೋಗ್ಯಕ್ಕೆ ಹಾನಿ ಮಾಡುತ್ತದೆ ಎನ್ನಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !