October 26, 2026
Monday, October 26, 2026
spot_img

Quick Tips | ಸೊಂಟದ ಅಳತೆ ಕಡಿಮೆ ಮಾಡಬೇಕೆ? ಹಾಗಾದರೆ ಯಾವ ಬಾಳೆಹಣ್ಣು ತಿನ್ನಬೇಕು ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಳೆಹಣ್ಣು ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ? ರುಚಿಯ ಜೊತೆಗೆ ಆರೋಗ್ಯಕ್ಕೂ ಇದು ನಂಬರ್ ಒನ್. ಆದ್ರೆ ತೂಕ ಇಳಿಸಿಕೊಳ್ಳಬೇಕು ಅನ್ಕೊಂಡಿರೋರಿಗೆ ದೊಡ್ಡ ಕನ್ಫ್ಯೂಷನ್ ಇರುತ್ತೆ ಹಣ್ಣಾದ ಬಾಳೆಹಣ್ಣು ತಿನ್ನಬೇಕಾ ಅಥವಾ ಹಸಿ ಹಾಗೂ ಕಾಯಿ ಬಾಳೆಹಣ್ಣು ತಿನ್ನಬೇಕಾ ಎಂಬ ಗೊಂದಲ ಅನೇಕರನ್ನು ಕಾಡುತ್ತದೆ. ಹಾಗಾದರೆ ಇದರ ಅಸಲಿ ಗುಟ್ಟನ್ನು ತಿಳಿದುಕೊಳ್ಳೋಣ.

ಹಸಿ ಬಾಳೆಹಣ್ಣು: ತೂಕ ಇಳಿಕೆಗೆ ಬೆಸ್ಟ್

ಇನ್ನೂ ಹಣ್ಣಾಗದ, ಹಸಿರು ಬಣ್ಣದ ಗಟ್ಟಿಯಾದ ಬಾಳೆಹಣ್ಣುಗಳಲ್ಲಿ ಸಕ್ಕರೆ ಅಂಶ ತುಂಬಾ ಕಡಿಮೆ ಇರುತ್ತದೆ. ಇದರಲ್ಲಿ ‘ರೆಸಿಸ್ಟ್ಂಟ್ ಸ್ಟಾರ್ಚ್’ ಎಂಬ ವಿಶೇಷ ಅಂಶ ತುಂಬಿರುತ್ತದೆ. ಇದು ನಮ್ಮ ಹೊಟ್ಟೆಯಲ್ಲಿ ನಾರಿನಾಮಶದಂತೆ ಕೆಲಸ ಮಾಡುತ್ತದೆ.

ಇದನ್ನು ತಿನ್ನುವುದರಿಂದ ಜೀರ್ಣಕ್ರಿಯೆ ನಿಧಾನವಾಗುತ್ತದೆ. ಇದರಿಂದ ಹೊಟ್ಟೆ ತುಂಬಿದ ಅನುಭವ ದೀರ್ಘಕಾಲ ಇರುತ್ತದೆ. ಪದೇ ಪದೇ ಹಸಿವಾಗುವುದನ್ನು ತಡೆಯುತ್ತದೆ ಮತ್ತು ದೇಹದಲ್ಲಿ ಕೊಬ್ಬು ಶೇಖರಣೆಯಾಗದಂತೆ ತಡೆಯಲು ಇದು ನೈಸರ್ಗಿಕವಾಗಿ ಸಹಾಯ ಮಾಡುತ್ತದೆ. ಆದ್ದರಿಂದ ವೇಟ್ ಲಾಸ್ ಮಾಡಿಕೊಳ್ಳಬೇಕು ಅಂದುಕೊಳ್ಳುವವರಿಗೆ ಹಸಿ ಬಾಳೆಹಣ್ಣು ತುಂಬಾ ಉತ್ತಮ.

ಹಣ್ಣಾದ ಬಾಳೆಹಣ್ಣು: ಶಕ್ತಿ, ಜೀರ್ಣಕ್ರಿಯೆಗೆ ಬೆಸ್ಟ್

ಚೆನ್ನಾಗಿ ಹಣ್ಣಾಗಿ, ಮೃದುವಾಗಿ ಸಿಹಿ ಇರುವ ಹಳದಿ ಬಾಳೆಹಣ್ಣುಗಳಲ್ಲಿ ರೆಸಿಸ್ಟ್ಂಟ್ ಸ್ಟಾರ್ಚ್ ಕ್ರಮೇಣ ನೈಸರ್ಗಿಕ ಸಕ್ಕರೆಯಾಗಿ ಬದಲಾಗುತ್ತದೆ. ಹಾಗಾಗಿ ಇದು ತಕ್ಷಣವೇ ದೇಹಕ್ಕೆ ಬೇಕಾದ ಚೈತನ್ಯ ಮತ್ತು ಎನರ್ಜಿಯನ್ನು ನೀಡುತ್ತದೆ.

ಇದರಲ್ಲಿ ಜೀರ್ಣಕ್ರಿಯೆಗೆ ಸಹಕಾರಿಯಾದ ಫೈಬರ್ ಮತ್ತು ಆಂಟಿಆಕ್ಸಿಡೆಂಟ್‌ಗಳು ಸಮೃದ್ಧವಾಗಿವೆ. ಜಿಮ್‌ಗೆ ಹೋಗುವವರು, ವರ್ಕೌಟ್ ಮಾಡುವವರು ಅಥವಾ ತಕ್ಷಣದ ಶಕ್ತಿ ಬೇಕಾದವರು ಹಣ್ಣಾದ ಬಾಳೆಹಣ್ಣನ್ನು ತಿನ್ನುವುದು ಅತ್ಯಂತ ಪ್ರಯೋಜನಕಾರಿ. ಆದರೆ ತೂಕ ಇಳಿಸುವ ಹಾದಿಯಲ್ಲಿರುವವರು ಇದನ್ನು ಮಿತವಾಗಿ ಸೇವಿಸುವುದು ಒಳ್ಳೆಯದು.

ತೂಕ ಇಳಿಕೆಗೆ ಯಾವುದು ಬೆಸ್ಟ್?

ನಿಮ್ಮ ಗುರಿ ತೂಕ ಇಳಿಸಿಕೊಳ್ಳುವುದೇ ಆಗಿದ್ದರೆ, ಸ್ವಲ್ಪ ಹಸಿರು ಇರುವ ಬಾಳೆಹಣ್ಣುಗಳು ಅಥವಾ ಮಧ್ಯಮ ಹಣ್ಣಾದ ಬಾಳೆಹಣ್ಣುಗಳನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ. ಏಕೆಂದರೆ ಇವುಗಳಲ್ಲಿ ಕ್ಯಾಲೊರಿ ಮತ್ತು ಸಕ್ಕರೆ ಅಂಶ ಕಡಿಮೆ ಇರುತ್ತದೆ.

ಆದರೆ ಜಿಮ್ ಮಾಡುವಾಗ ಅಥವಾ ತಕ್ಷಣಕ್ಕೆ ಶಕ್ತಿ ಬೇಕಾದಾಗ ಹಣ್ಣಾದ ಬಾಳೆಹಣ್ಣು ಕೂಡ ಒಳ್ಳೆಯದೇ. ಒಟ್ಟಿನಲ್ಲಿ, ನಿಮ್ಮ ದೇಹದ ಅಗತ್ಯಕ್ಕೆ ತಕ್ಕಂತೆ ಎರಡನ್ನೂ ಡಯಟ್‌ನಲ್ಲಿ ಮಿತವಾಗಿ ಸೇರಿಸಿಕೊಳ್ಳಿ.

ನಿಮ್ಮ ದೇಹದ ಅವಶ್ಯಕತೆ ಮತ್ತು ಸಮಯಕ್ಕೆ ತಕ್ಕಂತೆ ಇದನ್ನು ಆಯ್ದುಕೊಂಡರೆ ಆರೋಗ್ಯದ ಜೊತೆಗೆ ನಿಮ್ಮ ತೂಕವೂ ನಿಯಂತ್ರಣದಲ್ಲಿರುತ್ತದೆ.

Must Read

Skip to toolbar