July 6, 2026
Monday, July 6, 2026
spot_img

ರಾಜ್ಯದಲ್ಲಿ ಪ್ರತಿಯೊಬ್ಬರಿಗು ಆಯುಷ್ಮಾನ್‌ ಸೌಲಭ್ಯ ವಿಸ್ತರಣೆ: ಯು.ಟಿ.ಖಾದ‌ರ್

ಹೊಸದಿಗಂತ ವರದಿ ಸುಳ್ಯ:

ವ್ಯಕ್ತಿಗೆ ಅಧಿಕಾರ ಯಾವತ್ತೂ ಶಾಶ್ವತವಲ್ಲ,ಅಧಿಕಾರವಿರುವಾಗ ಪ್ರಾಮಾಣಿಕವಾಗಿ ಜನಪರವಾಗಿ ಕೆಲಸ ಮಾಡುವುದೇ ನಿಜವಾದ ಸೇವೆಯಾಗಿದೆ. ದುಶ್ಚಟ ಮುಕ್ತ ಮತ್ತು ದ್ವೇಷ ರಹಿತ ಸಮಾಜ ಕಟ್ಟುವುದು ನಮ್ಮ ಗುರಿಯಾಗಿದ್ದು ಅದಕ್ಕಾಗಿ ಸಂಪೂರ್ಣವಾಗಿ ಕೇವಲ ಸರಕಾರ ಮಂತ್ರಿಗಳು ಅಧಿಕಾರಿಗಳ ಕೆಲಸವಾಗದೇ ಸಂಘಸಂಸ್ಥೆಗಳು, ಪಂಡಿತರುಗಳು, ಧರ್ಮಗುರುಗಳು ಹೀಗೆ ಸರ್ವರ ಸಹಕಾರದಿಂದ ಮಾದಕ ವಸ್ತುಗಳ ಬಳಕೆಯನ್ನು ತಡೆಯಲು ಸಾಧ್ಯವಾಗಲಿದ್ದು ಇದಕ್ಕೆ ಸರ್ವರ ಸಹಕಾರವು ಅಗತ್ಯವಾಗಿದೆ ಎಂದು ಸಚಿವ ಯು.ಟಿ.ಖಾದರ್‌ ಹೇಳಿದರು.

ಅನಾರೋಗ್ಯ ಶ್ರೀಮಂತ ಬಡವ ಅನ್ನುವ ಭೇದಗಳಿಲ್ಲದೆ ಬರುತ್ತಿದ್ದು ರಾಜ್ಯದಲ್ಲಿ ಇದೀಗ ಆಯುಷ್ಮಾನ್ ಸೌಲಭ್ಯಗಳನ್ನು ಬಿ.ಪಿ.ಎಲ್‌. ಕಾರ್ಡ್ ದಾರರಿಗೆ ನೀಡಲಾಗುತ್ತಿದ್ದು ಮುಂದೆ ಎಪಿಎಲ್ ಕಾರ್ಡ್ ದಾರರಿಗೂ ವಿಸ್ತರಿಸಲಾಗುವುದು ಈ ಬಗ್ಗೆ ಈಗಾಗಲೇ ಮುಖ್ಯಮಂತ್ರಿಗಳ ಜೊತೆಗೆ ಚರದಚಿಸಲಾಗಿದೆ ಎಂದೂ ಅವರು ಸುಳ್ಯದಲ್ಲಿ ಹೇಳಿದರು.

ಇದೀಗ ಪ್ರತಿಯೊಬ್ಬರು ಸರಕಾರ ಇಚ್ಚಾಪೂರ್ವಕವಾಗಿ ಸಲಹೆ ನೀಡಿದಲ್ಲಿ ಅವುಗಳನ್ನು ಪಡೆದುಕೊಂಡು ಪರಿಶೀಲನೆ ನಡೆಸಿ ಅನುಷ್ಠಾನಕ್ಕೆ ತರಲಾಗುವುದು ಎಂದು ಹೇಳಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !