July 7, 2026
Tuesday, July 7, 2026
spot_img

ದಿನಭವಿಷ್ಯ: ಸರಿಯಾದ ದಿಕ್ಕಿನಲ್ಲಿ ಶ್ರಮ ಹಾಕಿದರೆ ಉತ್ತಮ ಫಲಿತಾಂಶ ಖಚಿತ

ಮೇಷ
ಸರಿಯಾದ ದಿಕ್ಕಿನಲ್ಲಿ ನಿಮ್ಮ ಶ್ರಮ ಹಾಕಿ. ಉತ್ತಮ ಫಲ ಪಡೆಯುವಿರಿ. ಫಲ ಮನೆಯಯಲ್ಲಿ, ಕಚೇರಿಯಲ್ಲಿ ವಾಗ್ವಾದ ನಡೆಸಬೇಡಿ.    
ವೃಷಭ
ನಿಮ್ಮ ಬದುಕಲ್ಲಿ ಹೊಸ ಬೆಳವಣಿಗೆ ಉಂಟಾದೀತು. ತಾಳುವ ನಿರ್ಧಾರ ಫಲ ನೀಡಲಿದೆ. ಮುಖ್ಯ ಗುರಿ ಸಾಧಿಸಲ್ಪಡಲಿದೆ.      
ಮಿಥುನ
ನೀರಸವಾಗಿ ದಿನ ಆರಂಭವಾದರೂ ಬಳಿಕ ಆಪ್ತರ ಭೇಟಿಯಿಂದ ಉತ್ಸಾಹ ತುಂಬಿಕೊಳ್ಳುವಿರಿ. ಕಾರ್ಯದಲ್ಲಿ ಯಶಸ್ಸು. ಧನಾಗಮ.            
ಕಟಕ
ನಿಮ್ಮ ಉದ್ದೇಶ ಈಡೇರಿಸಲು ಸೂಕ್ತ ದಿನ. ಅಡ್ಡಿ ಎದುರಾಗದು. ಹೆಚ್ಚು ಹೊಣೆಗಾರಿಕೆ ನಿಮ್ಮನ್ನು ಬಸವಳಿಸಬಹುದು. ಅನಿರೀಕ್ಷಿತ ಧನಪ್ರಾಪ್ತಿ.            
ಸಿಂಹ
ವೃತ್ತಿಯಲ್ಲಿ ಕಷ್ಟ ಎದುರಿಸುವಿರಿ. ಆದರಿದು ನಿಮ್ಮ ಕೌಟುಂಬಿಕ ಬದುಕಿನ ಮೇಲೆ ಪರಿಣಾಮ ಬೀರದು. ಆತ್ಮೀಯರ ಒಡನಾಟ ಮುದ ತರಲಿದೆ.    
ಕನ್ಯಾ
ಚಿಂತೆಯಿಲ್ಲದ ಸ್ಥಿರ ದಿನ. ಕೆಲವು ವಿಚಾರ ನಿಮಗೆ ಪೂರಕವಾಗಿ ಸಾಗುವುದು ನೆಮ್ಮದಿ ತರಲಿದೆ. ವಿರೋಽಗಳ ತಂತ್ರ ಫಲಿಸದು.  
ತುಲಾ
ಕಠಿಣ ದಿನ. ದಿನವಿಡೀ ಅಶಾಂತ ಮನಸ್ಸು. ಸಂಗಾತಿ ಜತೆ ವಾಗ್ವಾದಕ್ಕೆ ಹೋಗಬೇಡಿ. ದೇವರ ಪ್ರಾರ್ಥನೆ ನೆಮ್ಮದಿ ತರಬಹುದು.  
ವೃಶ್ಚಿಕ
ನೆಗೆಟಿವ್ ಚಿಂತನೆ ಮನಸ್ಸನ್ನು ಆವರಿಸಲಿದೆ. ಈ ಸ್ಥಿತಿಯಲ್ಲಿ ಯಶಸ್ಸು ಸಿಗಲಾರದು. ಮೊದಲಿಗೆ ನಿಶ್ಚಿಂತೆಯ ಮನೋಭಾವ ರೂಪಿಸಿಕೊಳ್ಳಿ.    
ಧನು
ಸಣ್ಣ ವಿಷಯ ವೊಂದು ಮನಸ್ಸಿನ ನೆಮ್ಮದಿ ಕಲಕಬಹುದು. ಅದನ್ನು ಸರಿಯಾಗಿ ನಿಭಾಯಿಸಿ. ಆತ್ಮೀಯರ ಜತೆ ಸಹನೆಯಿಂದ ವರ್ತಿಸಿ.      
ಮಕರ
ಕೆಲವಾರು ಒಳ್ಳೆಯ ಬೆಳವಣಿಗೆ ಸಂಭವಿಸಲಿದೆ. ಕೌಟುಂಬಿಕ ವಿಚಾರ ಮಾತ್ರ ಭಾವನಾತ್ಮಕ ಏರುಪೇರಿಗೆ ಕಾರಣವಾಗುವುದು. ಆರ್ಥಿಕ ಸ್ಥಿರತೆ.
ಕುಂಭ
ವೃತ್ತಿಯಲ್ಲೂ ಖಾಸಗಿ ಬದುಕಲ್ಲೂ ಏಳಿಗೆ. ದೀರ್ಘ ಕಾಲದ ಸಮಸ್ಯೆ ಪರಿಹಾರ. ಖಾಸಗಿ ಬದುಕಲ್ಲಿ ಹೊಸ ವ್ಯಕ್ತಿ ಪ್ರವೇಶಿಸಬಹುದು.
 ಮೀನ
ಈ ದಿನ ಅಡ್ಡಿಗಳನ್ನು ಎದುರಿಸುವಿರಿ. ಪ್ರಮುಖ ಕಾರ್ಯ ಮುಂದೂಡಿ. ಆಪ್ತರ ಜತೆ ನಿಮ್ಮ ಚಿಂತೆ ಹಂಚಿಕೊಳ್ಳಿ. ಹೆಚ್ಚುತ್ತಿರುವ ವೆಚ್ಚ ಚಿಂತೆ ತರಲಿದೆ.  

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !