ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ಕೃತಿ ಸೆನೊನ್ ಸದ್ಯ ಕಾಕ್ಟೇಲ್-2 ಸಿನಿಮಾಗಾಗಿ ತೂಕ ಇಳಿಸಿಕೊಂಡಿದ್ದಾರೆ, ಸ್ಕ್ರೀನ್ ಮೇಲೆ ಕೃತಿ ಅದ್ಭುತವಾಗಿ ಕಾಣಿಸ್ತಿದ್ದಾರೆ ಎಂದು ಹೇಳಿದ್ದಾರೆ. ಇತ್ತ ಕೃತಿ ಸೆನೊನ್ ತಮ್ಮ ದೇಹದ ತೂಕವನ್ನು ಹೆಚ್ಚಿಸಿಕೊಂಡ ಸಿನಿಮಾ ಬಗ್ಗೆ, ಎಗ್ಫ್ರೀಝ್ ಆಗಿರುವ ಬಗ್ಗೆ ಮಾತನಾಡಿದ್ದಾರೆ.

ಕೃತಿ ಸೆನೊನ್ ಮೊದಲ ನ್ಯಾಷನಲ್ ಅವಾರ್ಡ್ ಪಡೆದಿದ್ದಾರೆ. ಬಾಲಿವುಡ್ನ ಅದ್ಭುತ ಸಿನಿಮಾ ಮಿಮಿಗಾಗಿ ಕೃತಿ ಸೆನೊನ್ ತೂಕ ಹೆಚ್ಚಿಸಿಕೊಳ್ಳಬೇಕಿತ್ತು. ಹಾಗೆಯೇ ಎಗ್ಫ್ರೀಝ್ ಮಾಡುವ ಪ್ರಕ್ರಿಯೆಯಲ್ಲಿಯೂ ಹಲವಾರು ಇಂಜೆಕ್ಷನ್ಗಳನ್ನು ನೀಡಲಾಗುತ್ತದೆ. ಇದರಿಂದಲೂ ದೇಹ ಊದಿಕೊಳ್ಳುತ್ತದೆ. ಇದೇ ಬೆಸ್ಟ್ ಸಮಯ ಎಂದುಕೊಂಡ ಕೃತಿ ಮಿಮಿ ಸಿನಿಮಾಗಾಗಿ ತೂಕ ಏರಿಸಿಕೊಳ್ಳುವ ಸಮಯದಲ್ಲಿಯೇ ಎಗ್ ಫ್ರೀಝ್ ಮಾಡಿದ್ದರಂತೆ.
ನಮಗೆ ನಾವೇ ಕೊಟ್ಟುಕೊಳ್ಳಬಹುದಾದ ಅತ್ಯುತ್ತಮ ಉಡುಗೊರೆ. ಆಪ್ತರೊಬ್ಬರು ನೀಡಿದ ಸಲಹೆ ನನ್ನ ಮನಸ್ಸಿನಲ್ಲಿ ಉಳಿದುಕೊಂಡಿತ್ತು. ಭವಿಷ್ಯದಲ್ಲಿ ತಾಯಿಯಾಗುವ ಹಕ್ಕನ್ನು ಉಳಿಸಿಕೊಳ್ಳಲು ಈ ವೈದ್ಯಕೀಯ ಪದ್ಧತಿ ಸಹಕಾರಿಯಾಗಿದೆ. ತಾಯ್ತನಕ್ಕಾಗಿ ಕರಿಯರ್ ಸ್ಯಾಕ್ರಿಫೈಸ್ ಮಾಡಬೇಕಿಲ್ಲ. ನಮಗೆ ಇಷ್ಟವಾದಾಗ, ಮಗುವನ್ನು ಸಲಹುವ ಮನಸ್ಥಿತಿ ಬಂದಾಗ ಮಕ್ಕಳನ್ನು ಪಡೆಯಬಹುದು ಎಂದು ಹೇಳಿದ್ದಾರೆ.



