ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಂಬುಲೆನ್ಸ್ಗೆ ಜಾಗ ಬಿಡದೇ ಬೈಕ್ನಲ್ಲಿ ವ್ಹೀಲಿಂಗ್ ಮಾಡುತ್ತಾ ಹುಚ್ಚಾಟ ಮೆರದಿದ್ದ ಆರು ಅಪ್ರಾಪ್ತ ವಯಸ್ಕರನ್ನು ಬೆಂಗಳೂರಿನ ಯಶವಂತಪುರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಜುಲೈ ನಾಲ್ಕರ ಮಧ್ಯರಾತ್ರಿ ಯಶವಂತಪುರದಲ್ಲಿ ಈ ಆರು ಮಂದಿ ಬೈಕ್ನಲ್ಲಿ ವ್ಹೀಲಿಂಗ್ ಮಾಡುತ್ತಾ, ಗಲಾಟೆ ಮಾಡುತ್ತಾ ಆಂಬುಲೆನ್ಸ್ ಹಿಂದಿದ್ದರೂ ಮೈಮೇಲೆ ಪ್ರಜ್ಞೆ ಇಲ್ಲದವರಂತೆ ಗಾಡಿ ಓಡಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗ್ತಿದ್ದಂತೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.
ಯಶವಂತಪುರ ಸಂಚಾರಿ ಪೊಲೀಸರು ತನಿಖೆ ನಡೆಸಿದ್ದು, ಆರು ಅಪ್ರಾಪ್ತ ವಯಸ್ಕ ವ್ಹೀಲರ್ಸ್ಗಳನ್ನು ವಶಕ್ಕೆ ಪಡೆದಿದ್ದಾರೆ. ಈಗಾಗಲೇ ಯಶವಂತಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಮುಂದಿನ ಕಾನೂನು ಕ್ರಮ ಮುಂದುವರಿದಿದೆ.



