ಹೊಸದಿಗಂತ ಡಿಜಿಟಲ್ ಡೆಸ್ಕ್:
ನಮ್ಮ ಕಂಪನಿಗೆ ಬರೋಕೂ ಮುಂಚೆ ಸ್ವಿಮ್ಮಿಂಗ್ ಕಲ್ತಿರಬೇಕಿತ್ತು ಎಂದು ಹೇಳಿ ಕಂಪನಿಯೊಂದು ಎಂಪ್ಲಾಯಿಯನ್ನು ಕೆಲಸದಿಂದ ತೆಗೆದು ಹಾಕಿದ ಘಟನೆ ಮುಂಬೈನಲ್ಲಿ ನಡೆದಿದೆ. ಎಂಪ್ಲಾಯಿ ಹಾಗೂ ಬಾಸ್ ನಡುವಿನ ಚಾಟ್ ವೈರಲ್ ಆಗಿದ್ದು, ಕಂಪನಿ ಬಗ್ಗೆ ಜನ ಗರಂ ಆಗಿದ್ದಾರೆ.
ಪ್ರತೀಶ್ ಶೆಟ್ಟಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಈ ಘಟನೆ, ಬಾಸ್ ರಿಪ್ಲೈ ನೀಡಿದ ಇಮೇಲ್ ಸ್ಕ್ರೀನ್ಶಾಟ್ ಹಂಚಿಕೊಂಡಿದ್ದಾರೆ. ಬೆಳಗ್ಗೆ ನಮ್ಮ ಮ್ಯಾನೇಜರ್ಗೆ ಮೆಸೇಜ್ ಮಾಡಿದ್ದೆ” ಹೆಲೋ ಸರ್, ಹೊರಗೆ ತುಂಬಾ ಜೋರು ಮಳೆ ಬರ್ತಿದೆ. ರಸ್ತೆಯಲ್ಲೆಲ್ಲಾ ನೀರು ನಿಂತಿದೆ. ಈ ಸಮಯದಲ್ಲಿ ಹೊರಗೆ ಬರುವುದು ರಿಸ್ಕ್ ತೆಗೆದುಕೊಂಡಂತೆ. ಹೀಗಾಗಿ ಇಂದು ಮನೆಯಿಂದಲೇ ಕೆಲಸ ಮಾಡಬಹುದಾ? ಸ್ವಲ್ಪವೂ ಟೈಮ್ ವೇಸ್ಟ್ ಮಾಡದೇ ಕೆಲಸ ಮಾಡುತ್ತೇನೆ ಪ್ರಾಮಿಸ್ʼ ಎಂದು ಹೇಳಿದ್ದಾರೆ.
ಮ್ಯಾನೇಜರ್ ಉತ್ತರಕ್ಕಾಗಿ ಪ್ರತೀಶ್ ಕಾಯುತ್ತಾ ಇದ್ದರು. ಈಗ ಒಕೆ ಅಂದ್ರೆ ಸರಿ ಇಲ್ಲ ಆಫೀಸ್ಗೆ ಬನ್ನಿ ಎಂದರೆ ಹೊರಡಬೇಕು ತಡಮಾಡಬಾರದು ಎಂದುಕೊಂಡ ಸಮಯದಲ್ಲೇ ಆಫೀಸ್ನಿಂದ ಇ-ಮೇಲ್ ಬಂದಿದ್ದು, ಪ್ರತೀಶ್ ಶಾಕ್ ಆಗಿದ್ದಾರೆ.
ಸೂಕ್ತವಾಗಿ ಎಲ್ಲ ವಿಷಯಗಳನ್ನು ಅವಲೋಕಿಸಿ ಈ ನಿರ್ಧಾರಕ್ಕೆ ಬಂದಿದ್ದೇವೆ. ನಿಮ್ಮ ಮನೆಯ ಬಳಿ ರಸ್ತೆಯಲ್ಲಿ ನೀರು ನಿಂತಿದೆ. ನಿಮಗೆ ಆಫೀಸ್ ಬರೋದಕ್ಕೆ ಆಗೋದಿಲ್ಲ. ನಿಮಗೆ ಮನೆಯಿಂದಲೇ ಕೆಲಸ ಬೇಕು. ಇದೆಲ್ಲ ಗಮನಿಸಿದ್ದೇವೆ. ನಮ್ಮ ಕಂಪನಿಗೆ ಬರುವ ಮುನ್ನ ಸ್ವಿಮ್ಮಿಂಗ್ ಕಲಿತು ಆನಂತರ ಕೆಲಸಕ್ಕೆ ಅಪ್ಲೇ ಮಾಡಬೇಕಿತ್ತು. ಒಂದು ಕೆಲಸ ಮಾಡಿ ನೀವು ಇನ್ಮುಂದೆ ಮನೆಯಲ್ಲೇ ಇರಿ. ನಿಮ್ಮನ್ನು ಕೆಲಸದಿಂದ ತೆಗೆದುಹಾಕಲಾಗಿದೆ ಎಂದಿದ್ದಾರೆ.
ಉದ್ಯೋಗಿ ವರ್ಕ್ ಫ್ರಮ್ ಹೋಮ್ ಕೇಳಿದ ಕಾರಣಕ್ಕೆ ಕೆಲಸದಿಂದ ಕಿತ್ತು ಹಾಕುವ ನಿರ್ಧಾರ ಯಾಕೆ ಎಂದು ಹಲವರು ಪ್ರಶ್ನಿಸಿದ್ದಾರೆ.



