July 9, 2026
Thursday, July 9, 2026
spot_img

ಕೇಬಲ್-ಮೋಟಾರ್ ಪಂಪ್ ಕಳ್ಳತನ ಪ್ರಕರಣ: ಇಬ್ಬರು ಆರೋಪಿಗಳು ಅಂದರ್

ಹೊಸದಿಗಂತ ವರದಿ ಕಲಬುರಗಿ:

ಚಿತ್ತಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಮೋಟಾರ್ ಪಂಪ್ ಮತ್ತು ಕೇಬಲ್ ಕಳ್ಳತನ ಪ್ರಕರಣವನ್ನು ಪೊಲೀಸರು ಭೇದಿಸಿ, ಇಬ್ಬರು ಆರೋಪಿಗಳನ್ನು ಬಂಧಿಸಿ ಕಳುವಾದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸುಲು ತಿಳಿಸಿದ್ದಾರೆ.

ಜುಲೈ 2ರಂದು ಚಿತ್ತಾಪುರದ ಶಾಂತಿನಗರ ನಿವಾಸಿ ಸೈಯದ ನಸೀರ್ ಅವರು ತಮ್ಮ ಹೊಲದಲ್ಲಿದ್ದ 3 ಹೆಚ್‌ಪಿ ಸಾಮರ್ಥ್ಯದ ಮೂರು ಮೋಟಾರ್ ಪಂಪ್‌ಗಳು ಕಳುವಾಗಿವೆ ಎಂದು ದೂರು ನೀಡಿದ್ದರು. ದೂರಿನ ಮೇರೆಗೆ ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 98/2026ರಡಿ ಬಿಎನ್‌ಎಸ್ ಕಲಂ 331(4) ಮತ್ತು 305(ಎ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.

ಕಲಬುರಗಿ ಶಹಾಬಾದ್ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಶಂಕರಗೌಡ ಪಾಟೀಲ ಹಾಗೂ ಚಿತ್ತಾಪುರ ವೃತ್ತದ ಸಿಪಿಐ ಎಸ್.ಸಿ. ಪಾಟೀಲ ಅವರ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಿ ತನಿಖೆ ನಡೆಸಲಾಯಿತು.

ಇದನ್ನೂ ಓದಿ:

ತನಿಖೆ ವೇಳೆ ಆರೋಪಿಗಳಾದ ಮಂಜುನಾಥ ಅಂಜನಯ್ಯ (30) ಹಾಗೂ ಭೀಮಣ್ಣ (38), ಇಬ್ಬರೂ ಚಿತ್ತಾಪುರದ ಆಶ್ರಯ ಕಾಲೋನಿ ನಿವಾಸಿಗಳೆಂದು ಪತ್ತೆಯಾಗಿದೆ.ಅವರನ್ನು ಬಂಧಿಸಿದ ಪೊಲೀಸರು ಕಳುವಾಗಿದ್ದ 3 ಹೆಚ್‌ಪಿ ಸಾಮರ್ಥ್ಯದ ಮೂರು ಮೋಟಾರ್ ಪಂಪ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಜಪ್ತಿ ಮಾಡಲಾದ ವಸ್ತುಗಳ ಮೌಲ್ಯ ಸುಮಾರು 60 ಸಾವಿರ ಎಂದು ಅಂದಾಜಿಸಲಾಗಿದೆ.

ಪ್ರಕರಣ ಭೇದನೆಯಲ್ಲಿ ಪಿಎಸ್‌ಐ ಮಂಜುನಾಥ ರೆಡ್ಡಿ, ಎಎಸ್‌ಐ ಬಾಬು ಸೇರಿದಂತೆ ಪೊಲೀಸ್ ಸಿಬ್ಬಂದಿಯ ವಿಶೇಷ ತಂಡ ಕಾರ್ಯನಿರ್ವಹಿಸಿತು. ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿ ಆರೋಪಿಗಳನ್ನು ಬಂಧಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸುಲು ಪ್ರಶಂಸಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !