July 9, 2026
Thursday, July 9, 2026
spot_img

ಜಿಯೋಸ್ಟಾರ್-ಎಂಎಲ್ಬಿ ಒಪ್ಪಂದ ನವೀಕರಣ: ಬೇಸ್‌ಬಾಲ್ ಪ್ರಚಾರ ರಾಯಭಾರಿಯಾಗಿ ಸೂರ್ಯಕುಮಾರ್ ಯಾದವ್ ನೇಮಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಭಾರತದ ಕ್ರೀಡಾ ಅಭಿಮಾನಿಗಳಿಗೆ ಭರ್ಜರಿ ಸುದ್ದಿಯೊಂದು ಸಿಕ್ಕಿದೆ. ದೇಶಾದ್ಯಂತ ಬೇಸ್‌ಬಾಲ್ ಕ್ರೀಡೆಯನ್ನು ಉತ್ತೇಜಿಸಲು ಅಮೆರಿಕದ ಪ್ರಸಿದ್ಧ ಮೇಜರ್ ಲೀಗ್ ಬೇಸ್‌ಬಾಲ್ ಮತ್ತು ಜಿಯೋಸ್ಟಾರ್ ಸಂಸ್ಥೆಗಳು ತಮ್ಮ ಪ್ರಸಾರ ಒಪ್ಪಂದವನ್ನು ಯಶಸ್ವಿಯಾಗಿ ನವೀಕರಿಸಿವೆ.

ಸೂರ್ಯಕುಮಾರ್ ಹೊಸ ರಾಯಭಾರಿ:

ಭಾರತದಲ್ಲಿ ಬೇಸ್‌ಬಾಲ್ ಕ್ರೀಡೆಯ ಬೆಳವಣಿಗೆಗೆ ನೆರವಾಗಲು ಟಿ20 ವಿಶ್ವಕಪ್ ವಿಜೇತ ಟೀಮ್ ಇಂಡಿಯಾದ ನಾಯಕ ಹಾಗೂ ಸ್ಟಾರ್ ಬ್ಯಾಟರ್ ಸೂರ್ಯಕುಮಾರ್ ಯಾದವ್‌ನನ್ನು ಎಂಎಲ್ಬಿ ತನ್ನ ಅಧಿಕೃತ ಪ್ರಚಾರ ರಾಯಭಾರಿಯಾಗಿ ನೇಮಕ ಮಾಡಿದೆ. ಈ ಹೊಸ ಪಾಲುದಾರಿಕೆಯನ್ನು ಎಂಎಲ್ಬಿ ಗುರುವಾರ ಅಧಿಕೃತವಾಗಿ ಘೋಷಿಸಿದೆ.

ದೇಶಾದ್ಯಂತ ನೇರ ಪ್ರಸಾರ:

 ಜಿಯೋಸ್ಟಾರ್ ಜತೆಗಿನ ಒಪ್ಪಂದದ ನವೀಕರಣದಿಂದಾಗಿ ಇನ್ನು ಮುಂದೆ ದೇಶದಾದ್ಯಂತ ಕ್ರೀಡಾ ಅಭಿಮಾನಿಗಳಿಗೆ ಬೇಸ್‌ಬಾಲ್ ಆಟದ ನೇರ ಪ್ರಸಾರವು ಸುಲಭವಾಗಿ ತಲುಪಲಿದೆ. ಜಿಯೋಸ್ಟಾರ್ ನೆಟ್‌ವರ್ಕ್ ಮೂಲಕ ಅಭಿಮಾನಿಗಳು ಎಂಎಲ್ಬಿಯ ಅತ್ಯಾಕರ್ಷಕ ಪಂದ್ಯಗಳು, ಆಲ್-ಸ್ಟಾರ್ ಗೇಮ್ಸ್ ಹಾಗೂ ವರ್ಲ್ಡ್ ಸೀರಿಸ್ ಪಂದ್ಯಗಳನ್ನು ವೀಕ್ಷಿಸಬಹುದಾಗಿದೆ.

ಇದನ್ನೂ ಓದಿ:

ಕ್ರಿಕೆಟ್ ಮಾದರಿಯಲ್ಲೇ ಬ್ಯಾಟ್ ಮತ್ತು ಬಾಲ್ ಬಳಸುವ ಬೇಸ್‌ಬಾಲ್ ಆಟವು, ಸೂರ್ಯಕುಮಾರ್ ಯಾದವ್ ಜನಪ್ರಿಯತೆ ಹಾಗೂ ಜಿಯೋಸ್ಟಾರ್ ಪ್ರಸಾರದ ಬಲದೊಂದಿಗೆ ಭಾರತದ ಯುವ ಜನತೆಯನ್ನು ಇನ್ನಷ್ಟು ಆಕರ್ಷಿಸಲಿದೆ ಎಂದು ನಿರೀಕ್ಷಿಸಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !