July 10, 2026
Friday, July 10, 2026
spot_img

ಪ್ರವಾಹದಲ್ಲಿ ಉಳಿದ ಜೀವ ಹಾವು ಕಚ್ಚಿ ಹೋದೀತು! ಭಯದಲ್ಲಿ ದಿನಕಳೆಯುತ್ತಿರುವ ಚೀನಾ ಜನತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮನುಷ್ಯ ನಾನು, ನನ್ನದು ಎನ್ನುವುದಕ್ಕೆ ಇಡೀ ಜೀವನವನ್ನೇ ಸವೆಸುತ್ತಾರೆ. ಆದರೆ ಒಂದು ಪ್ರವಾಹ ಬಂದು ಬಡಿದರೆ ಜೀವನದ ನಿಜವಾದ ಅರ್ಥ ತಿಳಿಯುತ್ತದೆ. ಚೀನಾದ ಗುವಾಂಕ್ಸಿ ಪ್ರಾಂತ್ಯದಲ್ಲಿ ಇತ್ತೀಚೆಗೆ ನಡೆದ ಘಟನೆಯೇ ಸಾಕ್ಷಿಯಾಗಿದೆ.

ಜನ ಪ್ರವಾಹದಿಂದ ಮನೆಮಠ ಕಳೆದುಕೊಂಡು ಒದ್ದಾಡುತ್ತಿದ್ದಾರೆ. ಈ ಕಷ್ಟ ಸಾಲದು ಎನ್ನುವಂತೆ ಇದೀಗ ಹಾವಿನಲ್ಲಿ ಸಾವಿರಾರು ವಿಷಕಾರಿ ಹಾವುಗಳು ತೇಲಿಬರುತ್ತಿವೆ. ಪ್ರವಾಹದಲ್ಲಿ ಉಳಿದ ಜೀವ ಹಾವು ಕಚ್ಚಿ ಹೋದೀತೇ ಎನ್ನುವ ಭಯದಲ್ಲಿ ಜನರು ಇದ್ದಾರೆ.

ಹೆಂಗ್‌ಜೌ ನಗರದಲ್ಲಿ ನೀರಿನಿಂದ ತಪ್ಪಿಸಿಕೊಳ್ಳಲು ಓಡುತ್ತಿದ್ದ ಮಹಿಳೆ ಹಾವು ಕಚ್ಚಿ ಮೃತಪಟ್ಟಿದ್ದಾರೆ. ಇಡೀ ಊರೇ ಮುಳುಗುವ ಭೀತಿಯಲ್ಲಿದ್ದು, ರಸ್ತೆ ಸಂಪರ್ಕ ಇಲ್ಲದೆ, ಟ್ರಾಫಿಕ್‌ ಜಾಮ್‌ ಕೂಡ ಆಗಿದ್ದು ಮಹಿಳೆ ಆಸ್ಪತ್ರೆ ತಲುಪಲಾಗದೇ ಮೃತಪಟ್ಟಿದ್ದಾರೆ.

ಕೋಳಿ ಅಥವಾ ಹಸುಗಳನ್ನು ಸಾಕುವಂತೆ, ಚೀನಾದ ಗುವಾಂಗ್ಕ್ಸಿ ಪ್ರಾಂತ್ಯವು ವಿಶ್ವದ ಅತ್ಯಂತ ದೊಡ್ಡ ವಾಣಿಜ್ಯ ಹಾವು ಸಾಕಾಣಿಕೆಯ ಕೇಂದ್ರವಾಗಿದೆ. ಇಲ್ಲಿ ಸಾಂಪ್ರದಾಯಿಕ ಚೀನೀ ಔಷಧಗಳು, ಚರ್ಮದ ಉತ್ಪನ್ನಗಳು (ಬ್ಯಾಗ್, ಬೆಲ್ಟ್) ಮತ್ತು ಮಾಂಸದ ಆಹಾರಕ್ಕಾಗಿ ಬರೋಬ್ಬರಿ 30 ಮಿಲಿಯನ್ (3 ಕೋಟಿ) ಸರೀಸೃಪಗಳನ್ನು ಕೃತಕವಾಗಿ ಸಾಕಲಾಗುತ್ತದೆ. ಪ್ರವಾಹದ ನೀರು ಈ ಫಾರ್ಮ್‌ಗಳ ಗೋಡೆಗಳನ್ನು ಧ್ವಂಸಗೊಳಿಸಿದ್ದರಿಂದ ಇಷ್ಟೊಂದು ದೊಡ್ಡ ಪ್ರಮಾಣದ ಹಾವುಗಳು ಹೊರಬರಲು ಕಾರಣವಾಯಿತು.

ಇಷ್ಟೇ ಅಲ್ಲದೇ ಝೂನಿಂದ ಹಂದಿಗಳು, ಝೀಬ್ರಾಗಳು ಕೂಡ ರಸ್ತೆಗೆ ಬಂದಿವೆ. ಸದ್ಯ ಚೀನಾ ಸರ್ಕಾರವು ಹಾವುಗಳನ್ನು ಹಿಡಿಯಲು ತಜ್ಞರ ವಿಶೇಷ ಕಮಾಂಡೋ ತಂಡಗಳನ್ನು ಹಾಗೂ ಜನರನ್ನು ರಕ್ಷಿಸಲು 5,700 ಕ್ಕೂ ಹೆಚ್ಚು ಬೋಟ್‌ಗಳನ್ನು ನಿಯೋಜಿಸಿದೆ. ಹಾವಿನ ಕಡಿತಕ್ಕೊಳಗಾದ ನೆರೆ ಸಂತ್ರಸ್ತರಿಗೆ ತಕ್ಷಣ ಆಂಟಿ-ವೆನಮ್ ಚಿಕಿತ್ಸೆ ನೀಡಲು ಪ್ರವಾಹ ಪೀಡಿತ ಪ್ರದೇಶಗಳಲ್ಲೇ ತಾತ್ಕಾಲಿಕ ವೈದ್ಯಕೀಯ ಶಿಬಿರಗಳನ್ನು ತೆರೆಯಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !