July 11, 2026
Saturday, July 11, 2026
spot_img

ರೌಡಿಶೀಟರ್ ತುಳಸಿರಾಮ ಚಾಮರಾಜನಗರ ಜೈಲಿಗೆ ಗಡಿಪಾರು; ಜಿಲ್ಲಾಧಿಕಾರಿ ಡಾ. ಆನಂದ ಕೆ. ಆದೇಶ

ಹೊಸದಿಗಂತ ವರದಿ ವಿಜಯಪುರ:

ಸಾರ್ವಜನಿಕ ಶಾಂತಿ, ಸುವ್ಯವಸ್ಥೆ ಹಾಗೂ ಕಾನೂನು ಪಾಲನೆ ಹಿನ್ನೆಲೆ ರೌಡಿಶೀಟರ್ ತುಳಸಿರಾಮ ಹರಿಜನ ಉರ್ಫ್ ಬನಸೋಡೆ (27) ಈತನನ್ನು ವಿಜಯಪುರ ಜಿಲ್ಲೆಯಿಂದ ಗಡಿಪಾರು ಮಾಡಿ, ಚಾಮರಾಜನಗರ ಜೈಲಿನಲ್ಲಿ ಬಂಧನದಲ್ಲಿ ಇಡುವಂತೆ ಜಿಲ್ಲಾಧಿಕಾರಿ ಡಾ. ಆನಂದ ಕೆ. ಅವರು ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ:

ಆರೋಪಿ ತುಳಸಿರಾಮ ಹರಿಜನ ಉರ್ಫ್ ಬನಸೋಡೆ ಮೂಲತಃ ಇಂಡಿ ತಾಲೂಕಿನ ಅರ್ಜನಾಳ ಗ್ರಾಮದ ನಿವಾಸಿಯಾದ್ದು, ಸದ್ಯ ಇಲ್ಲಿನ ಜಲನಗರ ಪೊಲೀಸ್ ಠಾಣಾ ವ್ಯಾಪ್ತಿಯ ಗಣೇಶ ನಗರದಲ್ಲಿ ವಾಸವಿದ್ದು, ರಾಜ್ಯ ಅಕ್ರಮ ಕಳ್ಳಭಟ್ಟಿ ಸರಾಯಿ ವ್ಯವಹಾರ, ಮಾದಕ ದ್ರವ್ಯ ಅಪರಾಧ, ಜೂಜುಕೋರ, ಗೂಂಡಾ, ಅನೈತಿಕ ಮಾನವ ಕಳ್ಳಸಾಗಣೆ ಮಾಡುವ ಅಪರಾಧ, ಕೊಳಚೆ ಪ್ರದೇಶಗಳನ್ನು ಅಕ್ರಮವಾಗಿ ಅಕ್ರಮಿಸಿಕೊಳ್ಳುವುದು ಮತ್ತು ವಿಡಿಯೊ ಅಥವಾ ಆಡಿಯೊ ಪೈರಸಿ ಮಾಡುವ ಅಪಾಯಕಾರಿ ಚಟುವಟಿಕೆಗಳ ತಡೆ ಅಧಿನಿಯಮ- 1985 (ಗೂಂಡಾ ಕಾಯ್ದೆ)ರ ಕಲಂ 3(1) ಮತ್ತು 3(2)ರ ಅಡಿಯಲ್ಲಿ ರೌಡಿಶೀಟರ್ ತುಳಸಿರಾಮ ಹರಿಜನ ಈತನನ್ನು ಚಾಮರಾಜನಗರ ಜಿಲ್ಲಾ ಕಾರಾಗೃಹದಲ್ಲಿ ಬಂಧನದಲ್ಲಿ ಇರಿಸುವಂತೆ ಜು.10, 2026 ರಂದು ಜಿಲ್ಲಾಧಿಕಾರಿ ಅವರು ಆದೇಶ ಹೋರಡಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !