ಹೊಸದಿಗಂತ ಡಿಜಿಟಲ್ ಡೆಸ್ಕ್:
ನಮ್ಮೆಲ್ಲರ ಹೃದಯದಲ್ಲಿ ನಿಮ್ಮ ದನಿಗೆ ಖಾಯಂ ಜಾಗ ಇದೆ, ನಿಮ್ಮ ಕಂಠಸಿರಿಗೆ ಸಾವೇ ಇಲ್ಲ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಎಸ್. ಜಾನಕಿಯವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಜಾನಕಿಯವರ ನಿಧನದ ಸುದ್ದಿ ಕೇಳಿ ತೀವ್ರ ದುಃಖವಾಯಿತು. ಭಾರತದಲ್ಲಿ ಗಾನಕೋಗಿಲೆ ಎಂದೇ ಅವರನ್ನು ಕರೆಯುತ್ತಿದ್ದರು. ಅವರ ಕಂಠಿ ಇಂದು ಇದ್ದು ನಾಳೆ ಮರೆಯುವಂಥದ್ದಲ್ಲ. ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ತಲುಪಬೇಕಾದ್ದು. ಎಷ್ಟು ಜನರ ಮನಸ್ಸಿನಲ್ಲಿ ಅವರ ಹಾಡುಗಳಿಗೆ ಪರ್ಮನೆಂಟ್ ಜಾಗವಿದೆ ಲೆಕ್ಕವೇ ಇಲ್ಲ. ಕೆಲ ವರ್ಷಗಳಿಂದ ಜಾನಕಿಯವರು ಮೈಸೂರನ್ನು ತಮ್ಮ ಊರಾಗಿಸಿಕೊಂಡಿದ್ದರು. ಕನ್ನಡ, ಕನ್ನಡದ ಜನರನ್ನು ಪ್ರೀತಿಸುತ್ತಿದ್ದರು. ಸಂಗೀತ ಕ್ಷೇತ್ರದಲ್ಲಿ ಒಂದು ಬೃಹತ್ ಕೊಂಡಿ ಕಳಚಿದೆ. ಅವರು ಬಿಟ್ಟುಹೋದ ಅಸಾಧಾರಣ ಸಂಗೀತ ಪರಂಪರೆಯು ಮುಂದಿನ ಪೀಳಿಗೆಗೆ ಸ್ಫೂರ್ತಿ ಮತ್ತು ಪ್ರತಿಧ್ವನಿಸುತ್ತಲೇ ಇರುತ್ತದೆ.
ಅವರ ಉದಾತ್ತ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬ, ಸ್ನೇಹಿತರು ಹಾಗೂ ಕೋಟ್ಯಂತರ ಅಭಿಮಾನಿಗಳಿಗೆ ದುಃಖ ಸಹಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಟ್ವೀಟ್ ಮಾಡಿದ್ದಾರೆ.



