Tuesday, September 9, 2025

HEALTH | ವೈರಲ್ ಫೀವರ್ ಬಂದಾಗ ಈ ಆಹಾರಗಳನ್ನು ಸೇವಿಸಿದ್ರೆ ಸಾಕು!

ಇತ್ತೀಚಿಗೆ ವೈರಲ್ ಇನ್‌ಫೆಕ್ಷನ್‌ಗಳು ಹೆಚ್ಚು ಕಾಣಿಸಿಕೊಳ್ಳುತ್ತಿವೆ. ಈ ಸಮಯದಲ್ಲಿ ಸಣ್ಣ ಜ್ವರ, ಕೆಮ್ಮು, ಗಂಟಲು ನೋವು, ದಣಿವು ಸಾಮಾನ್ಯವಾಗಿಬಿಡುತ್ತದೆ. ವೈದ್ಯಕೀಯ ಚಿಕಿತ್ಸೆ ಮುಖ್ಯವಾದರೂ, ಸರಿಯಾದ ಆಹಾರ ಪದ್ಧತಿಯನ್ನು ಅನುಸರಿಸುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿ ವೈರಲ್ ಫೀವರ್ ಬೇಗ ಗುಣವಾಗಲು ಸಹಾಯವಾಗುತ್ತದೆ. ಈ ಹಿನ್ನೆಲೆಯಲ್ಲಿ ತಜ್ಞರು ಮನೆಯಲ್ಲೇ ದೊರೆಯುವ ಕೆಲವು ನೈಸರ್ಗಿಕ ಆಹಾರಗಳನ್ನು ಹೆಚ್ಚು ಸೇವಿಸಲು ಸಲಹೆ ನೀಡುತ್ತಾರೆ.

ಪಾಲಕ್, ನೆಲ್ಲಿಕಾಯಿ, ಶುಂಠಿ ಮತ್ತು ಬೆಳ್ಳುಳ್ಳಿ – ದೇಹದಲ್ಲಿ ವಿಟಮಿನ್ ಮತ್ತು ಆ್ಯಂಟಿ ಆಕ್ಸಿಡೆಂಟ್ಸ್ ಪೂರೈಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.
ಅರಿಶಿಣ ಮತ್ತು ತುಳಸಿ – ಕರ್ಕ್ಯೂಮಿನ್ ಮತ್ತು ಆ್ಯಂಟಿ ಮೈಕ್ರೊಬೀಯಲ್ ಅಂಶಗಳಿಂದ ಉರಿಯೂತ ತಡೆಯಲು ಸಹಕಾರಿ.
ಸಿಟ್ರಸ್ ಹಣ್ಣುಗಳು – ಕಿತ್ತಳೆ, ನಿಂಬೆ, ದ್ರಾಕ್ಷಿ ಬಿಳಿ ರಕ್ತಕಣಗಳನ್ನು ಹೆಚ್ಚಿಸಿ ದೇಹದ ರಕ್ಷಣಾ ಸಾಮರ್ಥ್ಯವನ್ನು ಬಲಪಡಿಸುತ್ತವೆ.
ಮೆಡಿಟೇರಿಯನ್ ಡಯಟ್ – ತರಕಾರಿ, ಹಣ್ಣು, ಧಾನ್ಯ ಮತ್ತು ಕಾಳುಗಳು ದೇಹಕ್ಕೆ ಸಮಗ್ರ ಪೋಷಕಾಂಶ ಒದಗಿಸುತ್ತವೆ.
ಜೇನುತುಪ್ಪ ಮತ್ತು ಸೋಂಪು – ಗಂಟಲು ನೋವು, ಕೆಮ್ಮು ನಿವಾರಣೆ ಮಾಡಿ ವೈರಲ್ ಸೋಂಕು ಕಡಿಮೆ ಮಾಡುತ್ತವೆ.

ಇದನ್ನೂ ಓದಿ