September 2, 2026
Wednesday, September 2, 2026
spot_img

ಕೃಷಿ ವಲಯದಲ್ಲಿ ಹೈಟೆಕ್ ಕ್ರಾಂತಿ: ಬೆಳೆ ಪತ್ತೆಗೆ ‘ಸ್ಯಾಟಲೈಟ್ ಸರ್ವೆ’ ಜಾರಿ; ತಕ್ಷಣವೇ ಸಿಗಲಿದೆ ಸೂಕ್ತ ಪರಿಹಾರ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಕೃಷಿ ಇಲಾಖೆಯು ರೈತರ ಬೆಳೆ ಸಮೀಕ್ಷೆ ವ್ಯವಸ್ಥೆಯನ್ನು ಸಂಪೂರ್ಣವಾಗಿ ಹೈಟೆಕ್ ಮಾಡಲು ಮುಂದಾಗಿದೆ. ಇಸ್ರೋ ಸಹಯೋಗದೊಂದಿಗೆ ಸ್ಯಾಟಲೈಟ್ ಮತ್ತು ಜಿಐಎಸ್ ತಂತ್ರಜ್ಞಾನ ಬಳಸಿ ಜಮೀನಿನಲ್ಲಿರುವ ಬೆಳೆಗಳನ್ನು ಗುರುತಿಸುವ ನೂತನ ಯೋಜನೆಗೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಚಾಲನೆ ನೀಡಲಾಗಿದೆ. ಈ ಡಿಜಿಟಲ್ ವ್ಯವಸ್ಥೆಯಿಂದಾಗಿ ಪ್ರಕೃತಿ ವಿಕೋಪ ಅಥವಾ ಮಳೆಯಿಂದ ಬೆಳೆ ಹಾನಿಯಾಗಿದ್ದರೆ ರೈತರಿಗೆ ಯಾವುದೇ ಮಧ್ಯವರ್ತಿಗಳಿಲ್ಲದೆ ನೇರವಾಗಿ ಸೂಕ್ತ ಪರಿಹಾರ ಹಾಗೂ ವಿಮೆ ಹಣ ಸಿಗಲಿದೆ.

ಚಿಕ್ಕಮಗಳೂರಲ್ಲಿ ಆರಂಭ:

ರಾಜ್ಯದಲ್ಲೇ ಮೊದಲ ಬಾರಿಗೆ ಚಿಕ್ಕಮಗಳೂರು ಜಿಲ್ಲೆಯನ್ನು ಈ ಪ್ರಾಯೋಗಿಕ ಯೋಜನೆಗೆ ಆಯ್ಕೆ ಮಾಡಿಕೊಳ್ಳಲಾಗಿದೆ. ಉಪಗ್ರಹಗಳ ನೆರವು ಹಾಗೂ ಜಿಪಿಎಸ್ ಆಧಾರಿತ ಫೋಟೋಗಳ ಮೂಲಕ ಕೇವಲ 5 ಮೀಟರ್ ಎತ್ತರದವರೆಗಿನ ನಿಖರ ಬೆಳೆ ಮಾಹಿತಿಯನ್ನು ಕೃಷಿ ಇಲಾಖೆ ಕಲೆಹಾಕಲಿದೆ. ಜಮೀನಿನಲ್ಲಿ ಬೆಳೆ ಬೆಳೆಯದೆ ಸುಳ್ಳು ಮಾಹಿತಿ ನೀಡಿ ಸರ್ಕಾರದ ಸೌಲಭ್ಯ ಪಡೆಯುತ್ತಿದ್ದ ಅಕ್ರಮಗಳಿಗೆ ಈ ಡಿಜಿಟಲ್ ಸರ್ವೆ ಸಂಪೂರ್ಣವಾಗಿ ಬ್ರೇಕ್ ಹಾಕಲಿದೆ.

ಇದನ್ನೂ ಓದಿ:

ರೈತರಿಗೆ ಸಿಗಲಿರುವ ಅನುಕೂಲಗಳೇನು?

ಪ್ರಕೃತಿ ವಿಕೋಪಕ್ಕೆ ಸಿಲುಕಿ ಬೆಳೆ ನಾಶವಾದರೆ, ಸ್ಯಾಟಲೈಟ್ ಡೇಟಾ ಆಧರಿಸಿ ವಿಮಾ ಕಂಪನಿಗಳು ಹಾಗೂ ಸರ್ಕಾರ ತಕ್ಷಣವೇ ಪರಿಹಾರ ಬಿಡುಗಡೆ ಮಾಡುತ್ತವೆ. ಅಧಿಕಾರಿಗಳ ಕಚೇರಿಗೆ ಅಲೆಯುವ ಅಗತ್ಯವಿಲ್ಲದೆ, ರೈತರ ಪರಿಹಾರ ಮತ್ತು ಸಂರಕ್ಷಣೆ ಖಾತೆಗಳಿಗೆ ನೇರವಾಗಿ ಹಣ ಜಮೆಯಾಗಲಿದೆ. ಕಂದಾಯ ಮತ್ತು ಕೃಷಿ ಇಲಾಖೆಯ ಹೊಸ ನಿಯಮಾವಳಿಗಳ ಪ್ರಕಾರ, ಬೆಳೆ ಹಾನಿ ವರದಿ ಸಲ್ಲಿಕೆಯಾದ 15 ರಿಂದ 30 ದಿನಗಳ ಒಳಗಾಗಿ ವಿಲೇವಾರಿ ಪ್ರಕ್ರಿಯೆ ಮುಗಿಯಬೇಕಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !