August 3, 2026
Monday, August 3, 2026
spot_img

ಮೈಸೂರಿನಲ್ಲೇ ನಿರ್ಮಾಣವಾಗಲಿ ಜಾನಕಿಯಮ್ಮನ ಭವ್ಯ ಸ್ಮಾರಕ: ನಾದಬ್ರಹ್ಮ ಹಂಸಲೇಖ ಮನವಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

“ಜಾನಕಿ ಅಂದರೆ ನಮಗೆ ಸೀತೆ, ಸೀತೆ ಎಂದರೆ ನಮಗೆ ಗೀತೆ. ಅವರ ಕೊನೆಯ ಆಸೆ ಕರುನಾಡಿನಲ್ಲೇ ಇರುವುದಾಗಿತ್ತು” ಎಂದು ಕಣ್ಣೀರಿಟ್ಟಿರುವ ನಾದಬ್ರಹ್ಮ ಹಂಸಲೇಖ ಅವರು, ಗಾಯಕಿ ಎಸ್. ಜಾನಕಿ ಅವರ ನೆನಪನ್ನು ಶಾಶ್ವತವಾಗಿ ಉಳಿಸಲು ಮೈಸೂರಿನಲ್ಲಿ ಭವ್ಯ ಸ್ಮಾರಕ ನಿರ್ಮಿಸಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಜಾನಕಿಯಮ್ಮನ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಾನಕಿ ಅಮ್ಮ ಕರುನಾಡಿನ ಮಣ್ಣಲ್ಲಿ ಕಣ್ಣು ಮುಚ್ಚಿದ್ದಾರೆ. ಅವರಿಗಾಗಿ ಕರುನಾಡ ಜನ ಈಗ ಕಣ್ಣು ತೆರೆಯಬೇಕು ಮತ್ತು ಸ್ಮಾರಕ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಹಂಸಲೇಖ ಕರೆ ನೀಡಿದರು.

ಸಚಿವರಿಗೆ ಒತ್ತಾಯ:

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಯತೀಂದ್ರ ಸಿದ್ದರಾಮಯ್ಯ ದೇವರ ಭಕ್ತರು. ಸಂಗೀತವೇ ದೇವರಿಗೆ ಪ್ರಿಯವಾಗಿರುವುದರಿಂದ, ಅವರು ತಕ್ಷಣವೇ ಜಾಗ ಗುರುತಿಸಿ ಸ್ಮಾರಕ ನಿರ್ಮಾಣದ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ಮನವಿ ಮಾಡಿದರು. ‌

ಇದನ್ನೂ ಓದಿ:

ಫಿಲ್ಮ್ ಚೇಂಬರ್ ನಡೆ:

 ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ತಕ್ಷಣವೇ ಕಾರ್ಯಪ್ರವೃತ್ತವಾಗಿ, ಸರ್ಕಾರದ ಮೇಲೆ ಒತ್ತಡ ತಂದು ಈ ಕಾರ್ಯವನ್ನು ಪೂರ್ಣಗೊಳಿಸಬೇಕು ಎಂದು ಹಂಸಲೇಖ ಒತ್ತಾಯಿಸಿದರು

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !