July 12, 2026
Sunday, July 12, 2026
spot_img

ರೈಲು ಪ್ರಯಾಣಿಕರೇ ಗಮನಿಸಿ! ಮೊಬೈಲ್‌ನಲ್ಲಿ ಒರಿಜಿನಲ್ ಟಿಕೆಟ್ ಇದ್ರೆ ಮಾತ್ರ ಇನ್ಮುಂದೆ ಪ್ರಯಾಣ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರೈಲು ಪ್ರಯಾಣಿಕರಿಗೆ ಭಾರತೀಯ ರೈಲ್ವೆ ಹೊಸ ಸೂಚನೆ ನೀಡಿದೆ. ಡಿಜಿಟಲ್ ಅನ್‌ರಿಸರ್ವ್ಡ್ ಟಿಕೆಟ್ ಬಳಸುವವರು ಇನ್ನು ಮುಂದೆ ಟಿಕೆಟ್‌ನ ಸ್ಕ್ರೀನ್‌ಶಾಟ್ ಅಥವಾ ಫೋಟೋ ತೋರಿಸಿ ಪ್ರಯಾಣಿಸಲು ಅವಕಾಶ ಇರುವುದಿಲ್ಲ. ಮೂಲ ಡಿಜಿಟಲ್ ಟಿಕೆಟ್‌ವನ್ನೇ ಅಧಿಕೃತ ಆ್ಯಪ್‌ನಲ್ಲಿ ಪ್ರದರ್ಶಿಸಬೇಕೆಂದು ರೈಲ್ವೆ ಸ್ಪಷ್ಟಪಡಿಸಿದೆ.

ಸ್ಕ್ರೀನ್‌ಶಾಟ್ ಟಿಕೆಟ್‌ಗೆ ಮಾನ್ಯತೆ ಇಲ್ಲ

ವಾಟ್ಸಾಪ್, ಟೆಲಿಗ್ರಾಂ ಅಥವಾ ಇತರೆ ಮೆಸೇಜಿಂಗ್ ಆ್ಯಪ್‌ಗಳಲ್ಲಿ ಬಂದ ಟಿಕೆಟ್‌ನ ಸ್ಕ್ರೀನ್‌ಶಾಟ್, ಫೋಟೋ ಅಥವಾ PDF ಪ್ರತಿಯನ್ನು ಮಾನ್ಯ ಟಿಕೆಟ್ ಎಂದು ಪರಿಗಣಿಸಲಾಗುವುದಿಲ್ಲ. ಇಂತಹ ಟಿಕೆಟ್ ತೋರಿಸಿದರೆ ನಿಯಮ ಉಲ್ಲಂಘನೆ ಎಂದು ಪರಿಗಣಿಸಿ ಕ್ರಮ ಕೈಗೊಳ್ಳಬಹುದು.

ಮೂಲ ಟಿಕೆಟ್ ತೋರಿಸುವುದು ಕಡ್ಡಾಯ

ಡಿಜಿಟಲ್ ಅನ್‌ರಿಸರ್ವ್ಡ್ ಟಿಕೆಟ್ ಹೊಂದಿರುವವರು ಟಿಕೆಟ್ ಬುಕ್ ಮಾಡಿದ ಅದೇ ಮೊಬೈಲ್‌ನಲ್ಲಿ, ಅಧಿಕೃತ ರೈಲ್ವೆ ಆ್ಯಪ್ ಮೂಲಕ ಮೂಲ (Original) ಟಿಕೆಟ್‌ವನ್ನೇ ತೋರಿಸಬೇಕು. ಬೇರೆ ಸಾಧನದಲ್ಲಿ ಅಥವಾ ಫಾರ್ವರ್ಡ್ ಮಾಡಿದ ಟಿಕೆಟ್‌ಗಳಿಗೆ ಅವಕಾಶ ಇರುವುದಿಲ್ಲ.

ಇದನ್ನೂ ಓದಿ:

ಪ್ರಯಾಣಕ್ಕೂ ಮುನ್ನವೇ ಟಿಕೆಟ್ ಬುಕ್ ಮಾಡಿ

ಅನ್‌ರಿಸರ್ವ್ಡ್ ಟಿಕೆಟ್‌ಗಳನ್ನು ರೈಲು ಹೊರಡುವ ಮೊದಲೇ ಬುಕ್ ಮಾಡಬೇಕು. ರೈಲು ಹೊರಟ ನಂತರ ಖರೀದಿಸಿದ ಟಿಕೆಟ್ ಮಾನ್ಯವಾಗುವುದಿಲ್ಲ ಎಂದು ರೈಲ್ವೆ ಸ್ಪಷ್ಟಪಡಿಸಿದೆ.

ರಿಸರ್ವ್ಡ್ ಟಿಕೆಟ್‌ಗೆ ಹಳೆಯ ನಿಯಮವೇ

ಈ ಹೊಸ ನಿಯಮವು ಸಾಮಾನ್ಯ (Unreserved) ಡಿಜಿಟಲ್ ಟಿಕೆಟ್‌ಗಳಿಗೆ ಮಾತ್ರ ಅನ್ವಯಿಸುತ್ತದೆ. IRCTC ಮೂಲಕ ಬುಕ್ ಮಾಡಿದ ರಿಸರ್ವ್ಡ್ ಟಿಕೆಟ್ ಹೊಂದಿರುವವರು ಅಧಿಕೃತ ಇ-ಟಿಕೆಟ್, SMS ಹಾಗೂ ಮಾನ್ಯ ಗುರುತಿನ ಚೀಟಿಯೊಂದಿಗೆ ಎಂದಿನಂತೆ ಪ್ರಯಾಣಿಸಬಹುದು. ಜೊತೆಗೆ ಪ್ರಯಾಣದ ವೇಳೆ ಟಿಕೆಟ್ ಬುಕ್ ಮಾಡಿದ ಮೊಬೈಲ್‌ನಲ್ಲಿ ಸಾಕಷ್ಟು ಬ್ಯಾಟರಿ ಇರುವಂತೆ ನೋಡಿಕೊಳ್ಳುವಂತೆ ರೈಲ್ವೆ ಸಲಹೆ ನೀಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !