ಹೊಸದಿಗಂತ ವರದಿ ವಿಜಯಪುರ:
ಗೃಹಸಚಿವ ಪ್ರಿಯಾಂಕ್ ಖರ್ಗೆಯವರು ಮೇಲಿಂದ ಮೇಲೆ ಬರೀ ಆರ್‌ಎಸ್‌ಎಸ್ ಬಿಟ್ರೆ ಬೇರೆ ಏನೂ ಮಾತನಾಡುತ್ತಿಲ್ಲ. ಪ್ರಚಾರಕ್ಕಾಗಿ ಆರ್‌ಎಸ್‌ಎಸ್ ಬಗ್ಗೆ ಅವರು ಮಾತನಾಡುತ್ತಿದ್ದಾರೆ ಎಂದು ಕನ್ಹೇರಿಯ ಅದೃಶ್ಯ ಕಾಡಸಿದ್ಧೇಶ್ವರ ಶ್ರೀ ಕಿಡಿಕಾರಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂದರೆ ಕೆಲವು ಜನರು ಏನು ಮಾಡುತ್ತಾರೆ ಅಂದರೆ, ದೊಡ್ಡವರಿಗೆ ಬೈದು ಬಿಟ್ಟರೆ ಸಾಕು ನಮಗೆ ಆರಾಮಾಗಿ ಪ್ರಚಾರ ಸಿಗುತ್ತೆ ಅಂತ ಒಂದು ಟೆಕ್ನಿಕ್ ಅವರಿಗೆ ಗೊತ್ತಾಗಿದೆ. ಆದ್ದರಿಂದ ಹಾಗೆ ಮಾಡುತ್ತಿರಬಹುದು ಅಂತ ಅನ್ಸುತ್ತೆ. ಈ ರೀತಿ ಮಾತನಾಡುತ್ತ ಹೋದರೆ ತಮ್ಮ ಅವನತಿಯನ್ನು ಅವರು ಬೇಗ ಕಂಡುಕೊಳ್ಳುತ್ತಾರೆ ಅಂತ ನನಗನಿಸುತ್ತೆ ಎಂದು ದೂರಿದರು.
ಪರ್ಮಿಷನ್ ತಗೋಬೇಕು ಅನಂತರ ಪಥಸಂಚಲನ ಮಾಡಬೇಕು ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಅವರು ನಾಳೆ ಊಟ ಮಾಡಲು ಪರ್ಮಿಷನ್ ಕೇಳುತ್ತಾರೆ. ತಗೋಬೇಕು ಅಂತ ಹೇಳುತ್ತಾರೆ. ಆರ್‌ಎಸ್‌ಎಸ್‌ನವರು ಮನೆಯಲ್ಲಿ ಊಟ ಮಾಡಬೇಕಾಗಿತ್ತು ಅಂದರೆ ಸರ್ಕಾರದ ಪರ್ಮಿಷನ್ ತಗೋಬೇಕು. ಈ ಊರಿನಿಂದ ಆ ಊರಿಗೆ ಎಲ್ಲಾದರೂ ಪ್ರವಾಸ ಮಾಡಬೇಕಾಗಿತ್ತು ಅಂದರೆ ಅದಕ್ಕೂ ಪರ್ಮಿಷನ್ ಕೇಳು ಅಂತ ಹೇಳ್ತಾರೆ ಎಂದರು.
ಅದು ಏನು ಒಂದು ಸಾರಿ ಹುಚ್ಚುಚ್ಚರಂತೆ ಮಾತನಾಡುವುದು ಅವರ ಸ್ವಭಾವವಾಗಿ ಬಿಟ್ಟಿರುತ್ತೆ ಕೆಲವು ಜನರಿಗೆ. ಹಾಗೇ ಇರಬಹುದು ಅಥವಾ ಅಂತದ್ದು ಒಂದು ಏನಾದರೂ ರೋಗ ಅವರಿಗೆ ಆಗಿರಬಹುದು ಅಂತ ನನಗನಿಸತ್ತೆ ಎಂದರು.
ಇದನ್ನೂ ಓದಿ:
ಪ್ರಿಯಾಂಕ್ ಖರ್ಗೆ ಆರ್‌ಎಸ್‌ಎಸ್ ಬಗ್ಗೆ ಮಾತನಾಡಿದರೆ ಕಾಂಗ್ರೆಸ್ ಪಕ್ಷಕ್ಕೆ ಮತ್ತು ಸರ್ಕಾರಕ್ಕೆ ಡ್ಯಾಮೇಜ್ ಆಗುತ್ತ ಎನ್ನುವ ಬಗ್ಗೆ ಪ್ರತಿಕ್ರಿಯಿಸಿ, ಆಗುತ್ತೆ, ಅದು ಒಂದೊಂದು ಸಾರಿ ದೇವರು ಹಾಗೆ ಮಾಡಿಸ್ತಾನೋ ಏನೋ. ವಿನಾಶಕಾಲೇ ವಿಪರೀತ ಬುದ್ಧಿ ಅಂತಾರಲ್ಲ ಹಾಗೆ ಆಗಿರಬಹುದು ಆ ಪುಣ್ಯಾತ್ಮರಿಗೆ ಅಂತ ಅನಿಸತ್ತೆ. ಅವರ ತಂದೆಯವರಾದರೂ ಹೇಳಬೇಕಾಗಿತ್ತು ಹೀಗೆ ಮಾಡಬಾರದು ಅಂತ. ಮಲ್ಲಿಕಾರ್ಜುನ ಖರ್ಗೆ ಪ್ರಿಯಾಂಕ್ ಖರ್ಗೆಗೆ ಬುದ್ಧಿ ಹೇಳಬೇಕಾಗಿತ್ತು. ಅವರು ಬುದ್ಧಿವಂತರು ಇದ್ದಾರೆ, ಹಳಬರು ಇದ್ದಾರೆ, ಅವನಿಗೆ ಬುದ್ಧಿ ಹೇಳಬೇಕಾಗಿತ್ತು. ಅವರೂ ಹೇಳ್ತಾಯಿಲ್ಲ ಯಾಕೋ ಏನೋ ಅಥವಾ ತಂದೆಯವರಿಗಿಂತಲೂ ಸ್ವಲ್ಪ ಎರಡು ಹೆಜ್ಜೆ ಮುಂದೆ ಹೋಗಿದ್ದಾರೋ ಏನೋ ಗೊತ್ತಿಲ್ಲ ಎಂದರು.
ಆರ್‌ಎಸ್‌ಎಸ್ ಎಲ್ಲೆಲ್ಲಿ ಸಭೆ ಮಾಡುತ್ತೋ ಅಲ್ಲಿ ಒಂದೊಂದು ಘಟನೆ ಆಗುತ್ತೆ. ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ ಆರೋಪ ವಿಚಾರಕ್ಕೆ, ಅದೇ ಅವರು ಕಾಮಾಲೆಯಾದವರಿಗೆಲ್ಲ ವಿಶ್ವವೇ ಹಳದಿ ಕಾಣಿಸತ್ತೆ ಅಂತಾರಲ್ಲ, ಆ ರೀತಿ ಕಾಣುತ್ತಿರಬಹುದು. ಆರ್‌ಎಸ್‌ಎಸ್ ಅದೊಂದು ರಾಷ್ಟ್ರಭಕ್ತಿಯನ್ನು ನಿರ್ಮಾಣ ಮಾಡುವಂತಹ ಸಂಘಟನೆ. ಅದನ್ನು ಯಾವ ದೃಷ್ಟಿಯಿಂದ ನೋಡುತ್ತೀವಿ ಆ ದೃಷ್ಟಿಯಿಂದ ಕಾಣಿಸುತ್ತದೆ. ಯಾರು ಯಾವ ಚಷ್ಮಾ ಹಾಕೊಂಡು ನೋಡ್ತಾರೋ ಅವರಿಗೆ ಹಂಗೆ ಕಾಣಿಸ್ತದೆ ಅದರಲ್ಲಿ ಏನಿದೆ. ಆರ್‌ಎಸ್‌ಎಸ್ ಇದೊಂದು ದೇಶಭಕ್ತ ಸಂಘಟನೆ. ಒಂದೊಂದು ಸಾರಿ ಹೇಳ್ತಿರ್ತಾರೆ, ನೊಣಗಳಲ್ಲಿ ಎರಡು ತರಹದ ನೊಣಗಳು ಇರ್ತಾವೆ. ಒಂದು ಈ ಹೊಲಸಿನ ಮೇಲೆ ಕೂಡುವಂಥ ನೊಣಗಳು ಮತ್ತೊಂದು ಜೇನು ಎಂದು ಕುಟುಕಿದರು.



