ಹೊಸದಿಗಂತ ವರದಿ ಉತ್ತರಕನ್ನಡ:
ಮುಂಡಗೋಡ ತಾಲೂಕಿನ ಕಾವಲಕೊಪ್ಪ ಗ್ರಾಮದ ಹತ್ತಿರ ಇಳಿಜಾರಿನ ತಿರುವಿನಲ್ಲಿ ಕೆಎಸ್ ಆರ್ ಟಿ ಸಿ ಬಸ್ ಹಾಗೂ ಲಾರಿ ನಡುವೆ ಮುಖಾಮುಖಿ ಡಿಕ್ಕಿಯಾಗಿ ಚಾಲಕರು ಸೇರಿ ಐವರು ಗಂಭೀರವಾಗಿ ಗಾಯಗೊಂಡ ಘಟನೆ ರವಿವಾರ ನಡೆದಿದೆ.

ಲಾರಿ ಚಾಲಕ ಮುಂಡಗೋಡದಿಂದ ಶಿರಶಿ ಕಡೆ ತೆರಳುತ್ತಿದ್ದನು ಬಸ್ ಚಾಲಕ ಹಾನಗಲ್ ದಿಂದ ಕಾತೂರ ಮಾರ್ಗವಾಗಿ ಮುಂಡಗೋಡ ಕಡೆ ಬರುತ್ತಿದ್ದ ವೇಳೆ ಕಾವಲಕೊಪ್ಪ ಗ್ರಾಮದ ಹತ್ತಿರ ಇಳಿಜಾರಿನ ತಿರುವಿನಲ್ಲಿ ಅಪಘಾತ ಸಂಭವಿಸಿದೆ. ಅದೃಷ್ಟವಶಾತ್ ಸಾವುನೋವು ಸಂಭವಿಸಿಲ್ಲ. ಗಂಭೀರ ಗಾಯಗೊಂಡ ಲಾರಿ ಚಾಲಕ ಮಹ್ಮದ ಹನೀಪ್ ಪಾರಿ, ಕ್ಲಿನರ್ ರಾಜು ಹರಿಜನ, ಬಸ ಚಾಲಕ ಹಜಮಿರಸಾಬ ಸೇರಿ ಐದು ಜನರನ್ನು ಹುಬ್ಬಳ್ಳಿ ಕಿಮ್ಸ್ ಗೆ ದಾಖಲಿಸಲಾಗಿದೆ.
ಇದನ್ನೂ ಓದಿ:
ಅಪಘಾತದ ರಭಸಕ್ಕೆ ಲಾರಿ ಹಾಗೂ ಬಸ್ಸಿನ ಮುಂಭಾಗ ಜಖಂಗೊಂಡಿದ್ದು, ಬಸ್ಸಿನಲ್ಲಿದ್ದ 30ಕ್ಕೂ ಹೆಚ್ಚು ಪ್ರಯಾಣಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ತಾಲ್ಲೂಕಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತಿದೆ.

ಸಣ್ಣಪುಟ್ಟ ಗಾಯಗೊಂಡವರಲ್ಲಿ ಮಕ್ಕಳು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ.



