July 13, 2026
Monday, July 13, 2026
spot_img

ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಭಾರಿ ರಶ್‌! ಅಸಭ್ಯವಾಗಿ ವರ್ತಿಸಿ ಅಡ್ವಾಂಟೇಜ್‌ ತೆಗೆದುಕೊಳ್ಳಲು ಬಂದ ವ್ಯಕ್ತಿಗೆ ಧರ್ಮದೇಟು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಂಗಳೂರಿನಿಂದ ನೆಲಮಂಗಲಕ್ಕೆ ಹೊರಟಿದ್ದ ಬಸ್‌ನಲ್ಲಿ ರಶ್‌ ಇದ್ದು, ಯುವತಿ ಜೊತೆ ಅನುಚಿತವಾಗಿ ವರ್ತಿಸಿದ ವ್ಯಕ್ತಿಗೆ ಧರ್ಮದೇಟು ಬಿದ್ದಿದೆ.

ಹೌದು, ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಹೆಚ್ಚು ರಶ್‌ ಇದ್ದ ಕಾರಣ ಯುವಕನೊಬ್ಬ ಯುವತಿ ಜೊತೆಗೆ ಅನುಚಿತವಾಗಿ ವರ್ತಿಸಿದ್ದಾನೆ. ವ್ಯಕ್ತಿಯ ಕಾಟಕ್ಕೆ ಬೇಸತ್ತು ಬಸ್‌ನಲ್ಲೇ ಅತ್ತಿದ್ದಾಳೆ. ಆಗ ಸಹ ಪ್ರಯಾಣಿಕರು ಯಾಕೆ ಅಳ್ತಿದ್ದೀಯ ಎಂದು ವಿಚಾರಿಸಿದ್ದಾರೆ. ಆಗ ಯುವತಿ ಕಾರಣ ತಿಳಿಸಿದ್ದಾರೆ.

ಬಸ್​​ನಲ್ಲಿ ಯುವತಿ ಜೊತೆಗೆ ಅನುಚಿತ ವರ್ತನೆ ತೋರಿದ ವ್ಯಕ್ತಿಗೆ ಧರ್ಮದೇಟು ಬಿದ್ದಿದೆ. ಅಸಭ್ಯವಾಗಿ ನಡೆದುಕೊಂಡ ವ್ಯಕ್ತಿಗೆ ಬಸ್​​ನಲ್ಲಿ ಇದ್ದವರೆಲ್ಲಾ ಛೀಮಾರಿ ಹಾಕಿದ್ದಾರೆ. ಆತ ಕೊಟ್ಟ ಕಿರುಕುಳವನ್ನ ಹೇಳೋಕೆ ಆಗದೆ ಯುವತಿ ಕಣ್ಣೀರು ಹಾಕಿದ್ದಾಳೆ. ಸಹ ಪ್ರಯಾಣಿಕರು ಪ್ರಶ್ನಿಸಿದಾಗ ವ್ಯಕ್ತಿಯ ಅನುಚಿತ ವರ್ತನೆ ಬಗ್ಗೆ ಹೇಳಿದ್ದಾಳೆ.

ಬಳಿಕ ಪ್ರಯಾಣಿಕರು ಆತನಿಗೆ ಬೈದಿದ್ದು, ಎಲ್ಲರ ಮುಂದೆ ಧರ್ಮದೇಟು ಕೊಟ್ಟು ಬಸ್​​ನಿಂದ ಕೆಳಗೆ ಇಳಿಸಿದ್ದಾರೆ. ಘಟನೆಯ ಬಗ್ಗೆ ಯುವತಿಯೊಬ್ಬಳು ತನ್ನ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಇಂತಹ ಘಟನೆಗಳಿಂದ ನಿತ್ಯ ಮಹಿಳಾ ಪ್ರಯಾಣಿಕರಿಗೆ ಕಿರಿಕಿರಿ ಉಂಟಾಗುತ್ತಲೇ ಇದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !