September 16, 2026
Wednesday, September 16, 2026
spot_img

ಬರದ ನಡುವೆ ಪ್ರಕೃತಿಯ ಸರ್ಪ್ರೈಸ್: ಬೋರ್‌ವೆಲ್‌ನಿಂದ ಬಾನೆತ್ತರಕ್ಕೆ ಚಿಮ್ಮಿದ ಜಲಧಾರೆ

ಹೊಸದಿಗಂತ ವರದಿ ವಿಜಯನಗರ:

​ಹಗರಿಬೊಮ್ಮನಹಳ್ಳಿ ತಾಲೂಕಿನ ಬನ್ನಿಕಲ್ಲು ಗ್ರಾಮದಲ್ಲಿ ಒಣ ಭೂಮಿಯಲ್ಲಿ ಕೊರೆಸಿದ ಬೋರ್‌ವೆಲ್‌ ಒಂದರಲ್ಲಿ ಭಾರೀ ಪ್ರಮಾಣದ ನೀರು ಬಾನೆತ್ತರಕ್ಕೆ ಚಿಮ್ಮಿದ ಅಪರೂಪದ ಘಟನೆ ನಡೆದಿದೆ.

​ಗ್ರಾಮದ ರೈತ ಸುನೀಲ್ ಎಂಬುವವರು ತಮ್ಮ ಬೆದ್ದಲು (ಖುಷ್ಕಿ) ಭೂಮಿಯಲ್ಲಿ ಕೃಷಿ ಉದ್ದೇಶಕ್ಕಾಗಿ ಬೋರ್‌ವೆಲ್ ಕೊರೆಸುತ್ತಿದ್ದರು. ಈ ವೇಳೆ ಅಂತರ್ಜಲದ ಭಾರೀ ಒತ್ತಡಕ್ಕೆ ಸಿಲುಕಿದ ಜಲಧಾರೆ, ಪಂಪ್ ಅಳವಡಿಸುವ ಮುನ್ನವೇ ಕಾರಂಜಿಯಂತೆ ಮೇಲಕ್ಕೆ ಚಿಮ್ಮಿದೆ.

ಬರದ ನಾಡಿನಲ್ಲಿ ಗಂಗಾ ಮಾತೆಯ ಭರಪೂರ ಹರಿದು ಬಂದಿದ್ದನ್ನು ಕಂಡು ರೈತ ಸುನೀಲ್ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ರೋಮಾಂಚನಗೊಂಡಿದ್ದು, ಜಲಧಾರೆಗೆ ಪೂಜೆ ಸಲ್ಲಿಸಿ ಸಂಭ್ರಮಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !