September 5, 2026
Saturday, September 5, 2026
spot_img

WEATHER | ಮಳೆಯೂ ಇಲ್ಲ, ಮಳೆಗಾಲದ ಫೀಲಿಂಗೂ ಇಲ್ಲ! ರಾಜ್ಯದಲ್ಲಿ ಇನೈದು ದಿನ ಬರೀ ಬಿಸಿಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜ್ಯದಲ್ಲಿ ಇಂದಿನಿಂದ ಐದು ದಿನಗಳು ಮಳೆಯ ಯಾವ ಮುನ್ಸೂಚನೆಯೂ ಇಲ್ಲ. ಬರೀ ಬಿಸಿಲು ಇರಲಿದೆ.

ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಮಳೆಗಾಲದ ಬಿಸಿಲು ಅಬ್ಬರಿಸಲಿದೆ. ಮಳೆಗಾಲ ಆರಂಭವಾದಾಗಿನಿಂದಲೂ ಬೆಂಗಳೂರಿಗರು ಥಂಡಿ ವೆದರ್‌ ಅಷ್ಟೇ ನೋಡಿದ್ದಾರೆ. ಮಳೆಯನ್ನಂತೂ ಕಂಡಿಲ್ಲ. ಈ ಬಾರಿ ಮಳೆಯ ಕೊರತೆ ಎದುರಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !