July 15, 2026
Wednesday, July 15, 2026
spot_img

ಶ್ರೀರಂಗಪಟ್ಟಣದ ಗೋಸಾಯ್‌ ಘಾಟ್‌ ಬಳಿ ಗಾನಕೋಗಿಲೆಯ ಅಸ್ಥಿ ವಿಸರ್ಜನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸುಪ್ರಸಿದ್ಧ ಗಾಯಕಿ ದಿ. ಎಸ್. ಜಾನಕಿ ಅವರ ಅಸ್ಥಿ ವಿಸರ್ಜನಾ ಕಾರ್ಯಕ್ರಮ ಶ್ರೀರಂಗಪಟ್ಟಣದ ಪವಿತ್ರ ಗೋಸಾಯ್ ಘಾಟ್ ಬಳಿಯ ಕಾವೇರಿ ನದಿಯಲ್ಲಿ ಭಕ್ತಿಭಾವದಿಂದ ನೆರವೇರಿತು.

ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ ಜಾನಕಿ ಅವರ ಮೊಮ್ಮಗಳು ಅಪ್ಸರಾ ಶಾಸ್ತ್ರೋಕ್ತವಾಗಿ ಕ್ರಿಯಾ ಕರ್ಮಗಳನ್ನು ನೆರವೇರಿಸಿ ಅಸ್ಥಿ ವಿಸರ್ಜನೆ ಮಾಡಿದ್ದಾರೆ. ಈ ಮೂಲಕ ಗಾನಕೋಗಿಲೆ ಎಸ್. ಜಾನಕಿ ಅವರ ಆತ್ಮ ಪಂಚಭೂತಗಳಲ್ಲಿ ಲೀನವಾಯಿತು.

ವಯೋಸಹಜ ಅನಾರೋಗ್ಯದಿಂದ ಮೈಸೂರಿನ ಅಪೊಲೋ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಎಸ್ ಜಾನಕಿ ಅವರು ಚಿಕಿತ್ಸೆ ಫಲಕಾರಿಯಾಗದೆ ಕಳೆದ ಶನಿವಾರ ಮೃತಪಟ್ಟಿದ್ದರು. ಅವರಿಗೆ 88 ವರ್ಷ ವಯಸ್ಸಾಗಿತ್ತು. ಜಾನಕಿಯವರ ನಿಧನಕ್ಕೆ ಇಡೀ ದೇಶವೇ ಸಂತಾಪ ಸೂಚಿಸಿತ್ತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !