September 2, 2026
Wednesday, September 2, 2026
spot_img

ಫಿಫಾ ಫುಟ್‌ಬಾಲ್ ಕ್ರೇಜ್: ಬೆಂಗಳೂರಿಗರಿಗೆ ಸಿಗಲಿದೆ ನೈಟ್ ಔಟ್ ಲೈವ್ ಸ್ಕ್ರೀನಿಂಗ್ ಮಜಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಫಿಫಾ ವಿಶ್ವಕಪ್ 2026ರ ರೋಚಕ ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹೋಟೆಲ್, ಪಬ್ ಮತ್ತು ರೆಸ್ಟೋರೆಂಟ್‌ಗಳಿಗೆ ಮಧ್ಯರಾತ್ರಿ 3:30ರ ವರೆಗೆ ಆಹಾರ ಸೇವೆ ಒದಗಿಸಲು ರಾಜ್ಯ ಸರ್ಕಾರ ಅಧಿಕೃತವಾಗಿ ಅನುಮತಿ ನೀಡಿದೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಈ ಮಹತ್ವದ ನಿರ್ಧಾರವನ್ನು ಟ್ವೀಟ್ ಮೂಲಕ ಪ್ರಕಟಿಸಿದ್ದಾರೆ.

ರಾಷ್ಟ್ರೀಯ ರೆಸ್ಟೋರೆಂಟ್ ಸಂಸ್ಥೆ (NRAI) ಮನವಿಗೆ ಸ್ಪಂದನೆ

ಭಾರತ ರಾಷ್ಟ್ರೀಯ ರೆಸ್ಟೋರೆಂಟ್ ಸಂಸ್ಥೆಯ (NRAI) ವಿಶೇಷ ಕೋರಿಕೆಯನ್ನು ಪುರಸ್ಕರಿಸಿದ ಸರ್ಕಾರ, ಕ್ರೀಡಾ ಪ್ರೇಮಿಗಳಿಗೆ ಅನುಕೂಲ ಮಾಡಿಕೊಟ್ಟಿದೆ. ಕರ್ನಾಟಕ ಪೊಲೀಸ್ ಕಾಯ್ದೆಯ ಅನ್ವಯ ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್ ಅವರು ತಡರಾತ್ರಿ ಪಂದ್ಯಗಳ ವೀಕ್ಷಣೆ ಮತ್ತು ಆಹಾರ ಪೂರೈಕೆಗೆ ಹಸಿರು ನಿಶಾನೆ ತೋರಿದ್ದಾರೆ. ಈ ವಿಶೇಷ ನಿಯಮಾವಳಿಯು ಜುಲೈ 14, 15 ಹಾಗೂ 19 ರಂದು ಮಾತ್ರ ಅನ್ವಯವಾಗಲಿದೆ.

ರೋಚಕ ಸೆಮಿಫೈನಲ್ ಪಂದ್ಯಗಳ ವಿವರ

ಪ್ರಸ್ತುತ FIFA ವಿಶ್ವಕಪ್ ಅಂತಿಮ ನಾಲ್ಕರ ಹಂತಕ್ಕೆ ತಲುಪಿದ್ದು, ಜುಲೈ 15ರ ಬುಧವಾರ ಮಧ್ಯರಾತ್ರಿ 12:30ಕ್ಕೆ ಡಲ್ಲಾಸ್ ಸ್ಟೇಡಿಯಂನಲ್ಲಿ ಬಲಿಷ್ಠ ಸ್ಪೇನ್ ಮತ್ತು ಫ್ರಾನ್ಸ್ ತಂಡಗಳು ಮೊದಲ ಸೆಮಿಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ. ಮತ್ತೊಂದು ಪಂದ್ಯದಲ್ಲಿ ಅರ್ಜೆಂಟೀನಾ ಮತ್ತು ಇಂಗ್ಲೆಂಡ್ ಸೆಣಸಾಡಲಿವೆ. ಈ ಹೈ-ವೋಲ್ಟೇಜ್ ಪಂದ್ಯಗಳನ್ನು ದೊಡ್ಡ ಪರದೆಯ ಮೇಲೆ ಸವಿಯಲು ಬೆಂಗಳೂರಿನ ಹೋಟೆಲ್‌ಗಳು ಸಜ್ಜಾಗಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !