ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದಿನಿಂದ ಆಷಾಢ ಮಾಸ ಆರಂಭವಾಗಿದ್ದು, ಈ ಮಾಸದಲ್ಲಿ ಮೈಸೂರಿನ ಚಾಮುಂಡೇಶ್ವರಿಯ ಸನ್ನಿಧಿಯಲ್ಲಿ ವಿಶೇಷ ಪೂಜೆ, ಪುನಸ್ಕಾರಗಳು ನಡೆಯುತ್ತದೆ. ಅದರಲ್ಲಿಯೂ ಆಷಾಢ ಸೋಮವಾರ, ಶುಕ್ರವಾರಕ್ಕೆ ಹೆಚ್ಚಿನ ಮಹತ್ವವಿದೆ.
ಪ್ರತಿ ಶುಕ್ರವಾರದಂದು ಚಾಮುಂಡಿ ಬೆಟ್ಟದಲ್ಲಿ ವಿಶೇಷ ಪೂಜೆ ಇದೆ. ಈ ಅವಧಿಯಲ್ಲಿ ಖಾಸಗಿ ವಾಹನಗಳನ್ನು ಬೆಟ್ಟದ ಮೇಲೆ ಬಿಡುವುದಿಲ್ಲ. ಲಲಿತಮಹಲ್ ಮೈದಾನದಿಂದ ಉಚಿತ ಬಸ್ ವ್ಯವಸ್ಥೆ ಇದೆ. ಬೆಳಗ್ಗೆ ಐದುವರೆಯಿಂದ ರಾತ್ರಿವರೆಗೂ ಅವಕಾಶ ಇದೆ.
ಇನ್ನು ಭಕ್ತರಿಗಾಗಿ ಎರಡು ಸಾವಿರದ ಟಿಕೆಟ್ ಮೂಲಕ ವಿಶೇಷ ದರುಶನಕ್ಕೆ ವ್ಯವಸ್ಥೆ ಇದೆ. ಆನ್‌ಲೈನ್ ಅಥವಾ ಬೆಟ್ಟದಲ್ಲಿ ಟಿಕೆಟ್ ಕೌಂಟರ್ ಇರಲಿದೆ. ಮುನ್ನೂರು ರೂಪಾಯಿ ಟಿಕೆಟ್‌ನ್ನು ರದ್ದು ಪಡಿಸಲಾಗಿದೆ. ಇನ್ನು ಮೆಟ್ಟಿಲು ಹತ್ತಿಯೂ ಭಕ್ತರು ಬೆಟ್ಟಕ್ಕೆ ಬರಬಹುದು.



