ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಕೆಆರ್ಪುರಂನಲ್ಲಿ ನಡೆದ ತ್ರಿವಳಿ ಕೊಲೆ ಕೇಸ್ನಲ್ಲಿ ಆರೋಪಿ ಕೆನತ್ ಮೂವರನ್ನು ಕೊಲೆ ಮಾಡಿದ್ದು ನಾನೇ ಎಂದು ಒಪ್ಪಿಕೊಂಡಿದ್ದಾನೆ.
ತನಿಖೆ ಆರಂಭದಲ್ಲಿ ಆರೋಪಿ ಶ್ವೇತಾ ಅಮ್ಮನನ್ನು ನಾನು ಕೊಲೆ ಮಾಡಿದ್ದೆ ಎಂದು ಹೇಳಿದ್ದಳು. ಆದರೆ ಆಕೆಯ ಪ್ರಿಯಕರ ಕೆನತ್ ಮೂವರನ್ನು ನಾನು ಕೊಂದಿದ್ದೇನೆ ಎಂದು ಹೇಳಿಕೊಂಡಿದ್ದ. ತಂದೆ ಸೋಮಸುಂದರ್ನನ್ನು ನಾನು ಹಾಗೂ ಶ್ವೇತಾ ಇಬ್ಬರೂ ಒಮ್ಮೊಮ್ಮೆ ಚುಚ್ಚಿ ಕೊಲೆ ಮಾಡಿದ್ದೆವು ಎಂದು ಹೇಳಿದ್ದ. ಆದರೆ ಏಕಕಾಲದಲ್ಲಿ ಒಬ್ಬ ವ್ಯಕ್ತಿ ಮೂರು ಜನರನ್ನು ಹೇಗೆ ಕೊಲ್ಲಲು ಸಾಧ್ಯ ಎಂದು ಪ್ರಶ್ನಿಸಿದ್ದರು.
ಬಳಿಕ ಕೋರ್ಟ್ ಅನುಮತಿ ಮೇರೆಗೆ ಕೆಆರ್ ಪುರ ಪೊಲೀಸರು ಮೂರು ದಿನದಲ್ಲಿ ಬ್ರೈನ್ ಮ್ಯಾಪಿಂಗ್ ನಡೆಸೋಕೆ ಸಿದ್ಧತೆ ನಡೆಸಿದ್ದರು. ಆದರೆ ಬ್ರೈನ್ ಮ್ಯಾಪಿಂಗ್ ಮಾಡೋಕೂ ಮುನ್ನವೇ ಇದರಲ್ಲಿ ಶ್ವೇತಾಳ ಪಾತ್ರವಿಲ್ಲ. ನಾನೇ ಮೂವರನ್ನು ಕೊಲೆ ಮಾಡಿದ್ದು ಎಂದು ತಪ್ಪೊಪ್ಪಿಕೊಂಡಿದ್ದಾನೆ.
ಆರೋಪಿಗಳಾದ ಶ್ವೇತಾ ಹಾಗೂ ಕೆನತ್ ಇಬ್ಬರು ಸೇರಿಕೊಂಡು ಶ್ವೇತಾಳ ತಂದೆ ಸೋಮಸುಂದರ್, ತಾಯಿ ಮುತ್ತು ಲಕ್ಷ್ಮಿ, ಸಹೋದರಿ ಸುಪ್ರಿಯಾಳನ್ನು ಕೊಲೆ ಮಾಡಿದ್ದರು. ಈ ಘಟನೆ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು.



