September 4, 2026
Friday, September 4, 2026
spot_img

ಟ್ರಂಪ್ ಗಡುವು ಮುಕ್ತಾಯ: ಇರಾನ್‌ನ ವಿದ್ಯುತ್ ಸ್ಥಾವರ, ಸೇತುವೆಗಳೇ ಟಾರ್ಗೆಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಶ್ಚಿಮ ಏಷ್ಯಾದಲ್ಲಿ ಅಮೆರಿಕ ಹಾಗೂ ಇರಾನ್ ಸೇನೆಗಳ ನಡುವೆ ಕ್ಷಿಪಣಿ ಮತ್ತು ಗುಂಡಿನ ದಾಳಿಗಳು ತೀವ್ರಗೊಂಡಿವೆ. ಈ ಬೆನ್ನಲ್ಲೇ ಶ್ವೇತಭವನದ ಅಧಿಪತಿ ಡೊನಾಲ್ಡ್ ಟ್ರಂಪ್ ಇರಾನ್ ವಿರುದ್ಧ ಅತ್ಯಂತ ಕಠಿಣ ಮಿಲಿಟರಿ ಕ್ರಮಕ್ಕೆ ಮುಂದಾಗಿದ್ದಾರೆ. ಶತ್ರು ದೇಶಕ್ಕೆ ಯಾವುದೇ ಕಾಲಾವಕಾಶ ನೀಡದೆ, ಅಲ್ಲಿನ ಪ್ರಮುಖ ನಾಗರಿಕ ಮೂಲಸೌಕರ್ಯಗಳನ್ನು ಧ್ವಂಸಗೊಳಿಸಲು ಸೇನೆಗೆ ಮುಕ್ತ ಅವಕಾಶ ನೀಡಿದ್ದಾರೆ.

ಡೊನಾಲ್ಡ್ ಟ್ರಂಪ್ ನೇರ ಎಚ್ಚರಿಕೆ

ಪೆನ್ಸಿಲ್ವೇನಿಯಾದ ರಕ್ಷಣಾ ಶೃಂಗಸಭೆಯಲ್ಲಿ ಮಾತನಾಡಿದ ಟ್ರಂಪ್, ತಮಗೆ ಗಡುವುಗಳನ್ನು ನೀಡುವುದು ಇಷ್ಟವಿಲ್ಲ ಎಂದಿದ್ದಾರೆ. ಆದರೆ ಇರಾನ್‌ಗೆ ಮುಂದೆ ಎದುರಾಗಲಿರುವ ವಿನಾಶದ ಅರಿವಿದೆ. ಅವರು ಈಗಲಾದರೂ ತಮ್ಮ ವರ್ತನೆಯನ್ನು ತಿದ್ದಿಕೊಳ್ಳಬೇಕು ಎಂದು ಗುಡುಗಿದ್ದಾರೆ.

ವಿನಾಶಕಾರಿ ಮಿಲಿಟರಿ ಸ್ಕೆಚ್‌ ಔಟ್!

ಮಾಧ್ಯಮ ಸಂದರ್ಶನವೊಂದರಲ್ಲಿ ಇರಾನ್ ವಿರುದ್ಧದ ದಾಳಿಯ ನೀಲನಕ್ಷೆಯನ್ನು ಟ್ರಂಪ್ ಬಹಿರಂಗಪಡಿಸಿದ್ದಾರೆ. ಅಮೆರಿಕ ವಿಧಿಸಿರುವ ನಿಯಮಗಳಿಗೆ ಒಪ್ಪಿ ಇರಾನ್ ಮಾತುಕತೆಗೆ ಬರದಿದ್ದರೆ, ಅಲ್ಲಿನ ವಿದ್ಯುತ್ ಸ್ಥಾವರಗಳು ಹಾಗೂ ಪ್ರಮುಖ ಸಂಪರ್ಕ ಸೇತುವೆಗಳನ್ನು ಅಮೆರಿಕದ ವಾಯುಪಡೆಗಳು ಸಂಪೂರ್ಣವಾಗಿ ಉಡಾಯಿಸಲಿವೆ ಎಂದು ಎಚ್ಚರಿಸಿದ್ದಾರೆ.

ಸಂಪರ್ಕ ಕಡಿತಕ್ಕೆ ಅಮೆರಿಕ ತಂತ್ರ

ಒಪ್ಪಂದಕ್ಕೆ ಬಾರದಿದ್ದರೆ ಇರಾನ್ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಟ್ರಂಪ್ ಹೇಳಿದ್ದಾರೆ. ಇರಾನ್‌ನ ಕನೆಕ್ಟಿವಿಟಿ ಸೇತುವೆಗಳನ್ನು ಧ್ವಂಸಗೊಳಿಸುವ ಮೂಲಕ ಆರ್ಥಿಕವಾಗಿ ಹತ್ತಿಕ್ಕಲು ಅಮೆರಿಕ ಸಜ್ಜಾಗಿದೆ. ಆದಾಗ್ಯೂ, ಈ ವಾಯುದಾಳಿಗಳ ಸಂದರ್ಭದಲ್ಲಿ ಅಮಾಯಕ ನಾಗರಿಕರಿಗೆ ತೊಂದರೆಯಾಗದಂತೆ ರಕ್ಷಣಾ ಪಡೆಗಳು ಮುನ್ನೆಚ್ಚರಿಕೆ ವಹಿಸಲಿವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !