July 16, 2026
Thursday, July 16, 2026
spot_img

ರಾಜ್ಯದ ರಫ್ತುದಾರರಿಗೆ ಬಂಪರ್ ಅವಕಾಶ: ಯುಕೆ ಮಾರುಕಟ್ಟೆಗೆ ಕಾಫಿ, ಮೆಣಸು ಸೇರಿ ಹಲವು ಉತ್ಪನ್ನಗಳಿಗೆ ಫ್ರೀ ಎಂಟ್ರಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ-ಬ್ರಿಟನ್ ಮುಕ್ತ ವ್ಯಾಪಾರ ಒಪ್ಪಂದ (FTA) ಜಾರಿಗೆ ಬಂದ ಬೆನ್ನಲ್ಲೇ ಕರ್ನಾಟಕದಿಂದ ಯುನೈಟೆಡ್ ಕಿಂಗ್‌ಡಮ್‌ಗೆ ರಫ್ತು ಸಾಗಣೆಗಳಿಗೆ ಚಾಲನೆ ದೊರೆತಿದ್ದು, ರಾಜ್ಯದ ಕೃಷಿ, ಕೈಗಾರಿಕೆ ಹಾಗೂ ಐಟಿ ಕ್ಷೇತ್ರಗಳಿಗೆ ಹೊಸ ಅವಕಾಶಗಳು ಸೃಷ್ಟಿಯಾಗುವ ನಿರೀಕ್ಷೆ ಮೂಡಿದೆ.

ಕರ್ನಾಟಕದ ಪ್ರಮುಖ ಉತ್ಪನ್ನಗಳಿಗೆ ಲಾಭ

ಹೊಸ ಒಪ್ಪಂದದಡಿ ಭಾರತೀಯ ಉತ್ಪನ್ನಗಳ ಬಹುಪಾಲು ಯುಕೆ ಮಾರುಕಟ್ಟೆಗೆ ಸುಂಕಮುಕ್ತ ಪ್ರವೇಶ ಪಡೆಯಲಿವೆ. ಇದರಿಂದ ಕೊಡಗು ಮತ್ತು ಚಿಕ್ಕಮಗಳೂರಿನ ಕಾಫಿ, ಬ್ಯಾಡಗಿ ಮೆಣಸಿನಕಾಯಿ, ಏಲಕ್ಕಿ, ಕರಿಮೆಣಸು, ಹೂವು, ಹಣ್ಣು, ತರಕಾರಿ, ಮೀನು ಹಾಗೂ ಸಂಸ್ಕರಿತ ಆಹಾರ ಉತ್ಪನ್ನಗಳ ರಫ್ತು ಹೆಚ್ಚಾಗುವ ಸಾಧ್ಯತೆ ಇದೆ.

ಇದನ್ನೂ ಓದಿ:

ಕೈಗಾರಿಕೆಗೂ ಹೊಸ ಅವಕಾಶ

ಜೈವಿಕ ತಂತ್ರಜ್ಞಾನ, ಔಷಧ, ಜವಳಿ, ಎಂಜಿನಿಯರಿಂಗ್, ಯಂತ್ರೋಪಕರಣ, ಏರೋಸ್ಪೇಸ್ ಮತ್ತು ವೈದ್ಯಕೀಯ ಸಾಧನಗಳ ರಫ್ತಿಗೂ ಈ ಒಪ್ಪಂದ ನೆರವಾಗಲಿದೆ. ಹಲವು ಉತ್ಪನ್ನಗಳ ಮೇಲಿನ ಆಮದು ಸುಂಕವನ್ನು ಯುಕೆ ಸರ್ಕಾರ ಶೂನ್ಯಕ್ಕೆ ಇಳಿಸಿರುವುದು ರಾಜ್ಯದ ಕೈಗಾರಿಕೆಗಳಿಗೆ ಉತ್ತೇಜನ ನೀಡಲಿದೆ.

ಐಟಿ, ಹೂಡಿಕೆಗೆ ಉತ್ತೇಜನ

ಬೆಂಗಳೂರು ಮತ್ತು ಮೈಸೂರಿನಲ್ಲಿ ಬ್ರಿಟನ್ ಮೂಲದ ಕಂಪನಿಗಳ ಗ್ಲೋಬಲ್ ಕ್ಯಾಪೆಬಿಲಿಟಿ ಸೆಂಟರ್‌ಗಳ (GCC) ಸ್ಥಾಪನೆಗೆ ಈ ಒಪ್ಪಂದ ಪೂರಕವಾಗಲಿದೆ. ಜೊತೆಗೆ, ರಾಜ್ಯ ಸರ್ಕಾರ ಬ್ರಿಟನ್‌ನಲ್ಲಿ ಹೂಡಿಕೆ ಆಕರ್ಷಿಸಲು ವಿಶೇಷ ಕಾರ್ಯಕ್ರಮಗಳು ಹಾಗೂ ರಫ್ತುದಾರರಿಗೆ ಜಾಗೃತಿ ಅಭಿಯಾನಗಳನ್ನು ಹಮ್ಮಿಕೊಳ್ಳಲು ಯೋಜನೆ ರೂಪಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !