July 16, 2026
Thursday, July 16, 2026
spot_img

ಕಲ್ಕಿ, ಸ್ಪಿರಿಟ್ ಬದಿಗಿಟ್ಟು ಸೈನಿಕನಾದ ಪ್ರಭಾಸ್: ನಿರೀಕ್ಷೆ ಹೆಚ್ಚಿಸಿದ ‘ಫೌಜಿ’ ಮಾಸ್ ಪೋಸ್ಟರ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟಾಲಿವುಡ್ ರೆಬೆಲ್ ಸ್ಟಾರ್ ಪ್ರಭಾಸ್ ನಟನೆಯ ಬಹುನಿರೀಕ್ಷಿತ ‘ಫೌಜಿ’ ಚಿತ್ರದ ಬಿಡುಗಡೆ ದಿನಾಂಕ ಅಧಿಕೃತವಾಗಿ ಹೊರಬಿದ್ದಿದೆ. ‘ಕಲ್ಕಿ 2898 ಎಡಿ’ ಹಾಗೂ ‘ಸ್ಪಿರಿಟ್’ ಚಿತ್ರಗಳಿಗಿಂತಲೂ ಮೊದಲೇ ಈ ಸಿನಿಮಾದ ಕಥೆಗೆ ಮಾರುಹೋಗಿದ್ದ ಪ್ರಭಾಸ್, ಇದರ ಶೂಟಿಂಗ್ ಅನ್ನು ಅತಿ ವೇಗವಾಗಿ ಆರಂಭಿಸಿದ್ದರು. ಕಲ್ಟ್ ಕ್ಲಾಸಿಕ್ ‘ಸೀತಾ ರಾಮಂ’ ಖ್ಯಾತಿಯ ಹನು ರಾಘವಪುಡಿ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಸಿನಿಪ್ರಿಯರಲ್ಲಿ ಭಾರಿ ಕುತೂಹಲ ಮೂಡಿಸಿದೆ.

ರಕ್ತಸಿಕ್ತ ಪೋಸ್ಟರ್; ಮಿಲಿಟರಿ ಶೈಲಿಯ ಪ್ರೇಮಕಾವ್ಯ?

ಸಿನಿಮಾದ ಹೆಸರೇ ಹೇಳುವಂತೆ ಪ್ರಭಾಸ್ ಇಲ್ಲಿ ಸೈನಿಕನ ಅಬ್ಬರದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಿರ್ದೇಶಕ ಹನು ರಾಘವಪುಡಿ ಅವರ ಹಿಂದಿನ ಸೂಪರ್ ಹಿಟ್ ಸಿನಿಮಾ ‘ಸೀತಾ ರಾಮಂ’ ಕೂಡ ಸೈನಿಕನ ಲವ್ ಸ್ಟೋರಿ ಹೊಂದಿತ್ತು. ಈಗ ‘ಫೌಜಿ’ ಚಿತ್ರದ ಮೂಲಕ ಮತ್ತೊಮ್ಮೆ ಅಂತಹದ್ದೇ ಮ್ಯಾಜಿಕ್ ಮಾಡಲು ಅವರು ಸಜ್ಜಾಗಿದ್ದಾರೆ. ಪ್ರಸ್ತುತ ಚಿತ್ರದ ಮೇಲಿನ ಹೈಪ್ ದುಪ್ಪಟ್ಟು ಮಾಡುವಂತಹ ಖಡಕ್ ಪೋಸ್ಟರ್ ಒಂದನ್ನು ಚಿತ್ರತಂಡ ಹಂಚಿಕೊಂಡಿದೆ.

ಡಿಸೆಂಬರ್ 3 ರಂದು ಪ್ರಭಾಸ್ ‘ಫೌಜಿ’ ಅಬ್ಬರ ಶುರು!

ಈಗ ಬಿಡುಗಡೆಯಾಗಿರುವ ಪೋಸ್ಟರ್‌ನಲ್ಲಿ ಪ್ರಭಾಸ್ ಮದುಮಗನಂತೆ ಪಂಚೆ ಉಟ್ಟು, ಕೈಯಲ್ಲಿ ಗನ್ ಹಿಡಿದು ಕುಳಿತಿದ್ದಾರೆ. ರಕ್ತಸಿಕ್ತ ದೇಹದೊಂದಿಗೆ ಹಿನ್ನೆಲೆಯಲ್ಲಿ ಶವಗಳ ರಾಶಿ ಇರುವುದು ಕಥೆಯ ತೀವ್ರತೆಯನ್ನು ಸಾರುತ್ತಿದೆ. ಪೋಸ್ಟರ್‌ನಲ್ಲಿ ‘ಬಟಾಲಿಯನ್ ಹೂ ಫೈಟ್ಸ್ ಅಲೋನ್’ ಎಂಬ ಕ್ಯಾಚಿ ಟ್ಯಾಗ್‌ಲೈನ್ ಇದ್ದು, ಸಿನಿಮಾವು ಇದೇ ಡಿಸೆಂಬರ್ 3 ರಂದು ವಿಶ್ವಾದ್ಯಂತ ಗ್ರ್ಯಾಂಡ್ ಆಗಿ ತೆರೆಕಾಣಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !